ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಆನ್‌ಲೈನ್ ಸಾಲವಂಚನೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ದೂರವಾಣಿ ಕರೆಯ ಮೂಲಕ, ಮೆಸೇಜುಗಳ ಮೂಲಕ ಸುಲಭವಾಗಿ ಸಾಲ ಕೊಡುವುದಾಗಿ ನಂಬಿಸಿ ಅವರಿಂದ ದಾಖಲೆಗಳನ್ನು ಪಡೆದು ಬ್ಯಾಂಕ್ ಅಕೌಂಟ್ ಡೀಟೇಲ್ಸ್‌ಗಳನ್ನು ಪಡೆದು ವಂಚಿಸುವ ವ್ಯವಸ್ಥಿತ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಸುಲಭವಾದ ಪ್ರಕ್ರಿಯೆ ಇರುವುದರಿಂದ ಹೆಚ್ಚಿನ ಜನರು ಈ ಜಾಲದೆಡೆಗೆ ಆಕರ್ಷಿತರಾಗುತ್ತಾರೆ. ಈ ಜಾಲದಲ್ಲಿ ಸಿಲುಕಿ ಅಪಾರ ಹಣ ಕಳೆದುಕೊಂಡ ಉದಾಹರಣೆಗಳು ದಿನಂಪ್ರತಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಸಾಲ ವಂಚನೆಯಿಂದ ತಪ್ಪಿಸಿಕೊಳ್ಳಲು ಕೆಲ ಅಗತ್ಯ ಸಲಹೆಗಳು ಇಲ್ಲಿವೆ
- ಸಾಲ ಆಮಿಶದ ಆಫರ್ ಗಳು ಬಂದಾಗ ನಿಮಗೆ ತೀರಾ ಅವಶ್ಯವಿದ್ದರೂ ಆಫರ್ ಒಪ್ಪಿಕೊಳ್ಳುವ ಮುನ್ನ ಡಬಲ್ ಚೆಕ್ ಮಾಡಿ
- ಸಂಪರ್ಕ ಸಂಖ್ಯೆ, ಸಾಲದಾತರ ಇತರ ವಿವರಗಳನ್ನು ಕ್ರಾಸ್ ಚೆಕ್ ಮಾಡಿಕೊಳ್ಳಿ
- ಆರ್‌ಬಿಐ ವೆಬ್‌ಸೈಟಿನಲ್ಲಿ ಸಾಲದಾತರ ವಿವರಗಳು ಲಭ್ಯವಿದೆಯೇ ಎಂದು ಪರಿಶೀಲಿಸಿ, ಹಣಕಾಸಿನ ವಿಷಯದಲ್ಲಿ ಆರ್‌ಬಿಐ ಸಲಹೆ ಸೂಚನೆಗಳನ್ನು ಪಾಲಿಸಿ
- ಬೇರೆ ಯಾವುದೋ ಮೂಲಗಳಿಂದ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್ ಮಾಡಬೇಡಿ, ಪ್ಲೇಸ್ಟೋರ್ ನಂತಹ ಆಫಿಷಿಯಲ್ ಆಪ್ ಸ್ಟೋರ್‌ಗಳಿಂದಲೇ ಡೌನ್ಲೋಡ್ ಮಾಡಿ.
- ನೀವು ಕಂಪ್ಯೂಟಟ್ ಸಿಸ್ಟಂ ನಲ್ಲಿ ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಬ್ಯಾಂಕ್ ವೆಬ್ಸೈಟ್ ಓಪನ್ ಮಾಡಿದಾಗ ಇತರ ಬೇರೆಯಾವುದೇ ಅನಧಿಕೃತ ಟ್ಯಾಬ್ ಓಪನ್ ಮಾಡಬೇಡಿ.
- ಲಾಗಿನ್ ಹಾಗು ಲಾಗೌಟ್ ಅತ್ಯಂತ ಸುರಕ್ಷಿತವಾಗಿರಲಿ. ಲಾಗೌಟ್ ಅನ್ನು ಯಾವುದೇ ಕಾರಣಕ್ಕೂ ಅಲಕ್ಷಿಸಬೇಡಿ
- ಕೆಲವರು ಬೇಕಂತಲೇ ಸಾಲ ಬೇಕಾ? ನಿಮಗೆ ಸಹಾಯ ಮಾಡುತ್ತೇವೆ ಎಂದೆಲ್ಲ ಅನೌನ್ ನಂಬರಿಂದ ಕಾಲ್, ಮೆಸೇಜ್ ಮಾಡುತ್ತಾರೆ ಅವುಗಳನ್ನು ಇಗ್ನೋರ್ ಮಾಡಿ.
- ಅನುಮಾನಾಸ್ಪದ ಲಿಂಕುಗಳನ್ನು, ಇಮೇಲ್‌ಗಳನ್ನು ತೆರೆಯಬೇಡಿ
- ಮೊಬೈಲ್ ಅನ್ನು ಸೆಕ್ಯೂರ್ ಆಗಿಡಿ, ಥರ್ಡ್ ಪಾರ್ಟಿ ಅಪ್ಲಿಕೇಷನ್ ಗಳಿಗೆ ಬೇಕಾಬಿಟ್ಟಿ ಪರ್ಮೀಶನ್ ನೀಡಬೇಡಿ.
- ಲ್ಯಾಪ್ ಟಾಪ್, ಕಂಪ್ಯೂಟರ್‌ಗಳಲ್ಲಿ ಎಂಟಿವೈರಸ್ ಸಾಫ್ಟ್ ವೇರ್ ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಿರಿ
- ನಿಮ್ಮ ಪಾಸ್‌ವರ್ಡ್ ಸ್ಟ್ರಾಂಗ್ ಆಗಿರಲಿ. ಅಲ್ಫಾನ್ಯೂಮರಿಕ್ ಆಗಿರಲಿ. ವಿಶೇಷ ಚಿಹ್ನೆಗಳು, ಅಲ್ಫಾಬೆಟ್, ಸಂಖ್ಯೆಗಳು ಕ್ಯಾಪಿಟಲ್ ಮತ್ತು ಸ್ಮಾಲ್ ಅಕ್ಷರಗಳು ಮಿಶ್ರಣವಾಗಿರಲಿ. ಕನಿಷ್ಟ 8 ಅಕ್ಷರಗಳಿರಲಿ
- ಒಂದುವೇಳೆ ಸಮಸ್ಯೆಯಾದರೆ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಸಹಾಯ ಪಡೆಯಿರಿ, ಸೈಬರ್ ಸೆಕ್ಯುರಿಟಿ ಇಲಾಖೆಯನ್ನು ಸಂಪರ್ಕಿಸಿ