ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜು ವೆಡ್ಸ್ ಗೀತಾ2 ಮಾತುಕತೆ ನಡೀತಾ ಇದೆ, ಈ ಸಿನಿಮಾಗೆ ಶ್ರೀನಗರ ಕಿಟ್ಟಿ ಹೀರೋ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ, ಆದ್ರೆ ಹೀರೋಯಿನ್ ಯಾರು ಅನ್ನೋದು ಗುಟ್ಟಾಗಿಯೇ ಉಳಿದಿದೆ.
ಇನ್ನು ಪಾರ್ಟ್ 1ನಲ್ಲಿ ರಮ್ಯಾ ಮಿಂಚಿದ್ದರು, ಇತ್ತೀಚೆಗೆ ರಮ್ಯಾ ವರ್ಕೌಟ್ ವಿಡಿಯೋಗಳನ್ನು ಬೇರೆ ಹಂಚಿಕೊಳ್ತಿದ್ದಾರೆ ಹಾಗಾಗಿ ರಮ್ಯಾ ಈ ಸಿನಿಮಾ ತಯಾರಿಯಲ್ಲಿದ್ದಾರಾ ಅನ್ನೋ ಅನುಮಾನ ಎಲ್ಲರನ್ನೂ ಕಾಡಿತ್ತು. ಆದರೆ ಈ ಸಿನಿಮಾಗೆ ರಮ್ಯಾ ಬದಲು ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆಯಂತೆ.
ನಾಗಶೇಖರ್ ತಮ್ಮ ಸಿನಿಮಾಗಳಲ್ಲಿ ಹೀರೋಯಿನ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡ್ತಾರೆ ಹಾಗಾಗಿ ಈ ಸಿನಿಮಾ ಒಪ್ಪದಕ್ಕೆ ರಚಿತಾ ರಾಮ್‌ಗೆ ಯಾವ ರೀಸನ್ ಕೂಡ ಸಿಗೋದಿಲ್ಲ ಎನ್ನಲಾಗ್ತಿದೆ. ರಚಿತಾ ಸಿನಿಮಾ ಒಪ್ತಾರಾ? ಕಾದುನೋಡಬೇಕಿದೆ.