ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮನ್ನಾ ಸದ್ಯ ‘ಜೀ ಕರ್ದಾ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಲಸ್ಟ್ ಸ್ಟೋರೀಸ್ 2 ನಲ್ಲಿ ತನ್ನ ಸಹ-ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಇತ್ತೀಚೆಗೆ ಖಚಿತಪಡಿಸಿದ ತಮನ್ನಾ, ತಾನು ಯಾವಾಗ ಮದುವೆಯಾಗುತ್ತೇನೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ನೀಡಿಲ್ಲ.
ಇತ್ತೀಚೆಗಷ್ಟೇ ‘ಜೀ ಕರ್ದಾ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಈ ಚೆಲುವೆ ಮದುವೆ ಬಗ್ಗೆ ಕೇಳಿದಾಗ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಬಗ್ಗೆ ಮಾತನಾಡಿದ ಅವರು, ಮದುವೆ ಎಂಬುದು ಒಂದು ಪಾರ್ಟಿಯಲ್ಲ, ಅದೊಂದು ದೊಡ್ಡ ಜವಾಬ್ದಾರಿ ಸಾಕಷ್ಟು ಸಮಯವಿದೆ ಎಂದರು. ಗಿಡ, ನಾಯಿ ಸಾಕುವ, ಮಕ್ಕಳನ್ನು ಹೆರುವ ಹೊಣೆಗಾರಿಕೆಗೆ ತಯಾರಿ ಮಾಡಿಕೊಳ್ಳುವಂತೆಯೇ ಮದುವೆಯೂ ನಾವು ಸಿದ್ದರಿದ್ದಾಗ ಮಾತ್ರ ಮಾಡಿಕೊಳ್ಳಬೇಕು ಎಂದರು.
ವಿಜಯ್ ವರ್ಮಾ ತನ್ನ ಬಗ್ಗೆ ತುಂಬಾ ಕಾಳಜಿ ವಹಿಸುವ ವ್ಯಕ್ತಿ ಎಂದು ತಮನ್ನಾ ಸ್ಪಷ್ಟಪಡಿಸಿದ್ದಾರೆ.