ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೆಬೆನಾನ್ ನಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಮೇಲಿನ ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದಿರುವ ಹೆಜ್ಬೊಲ್ಲಾ ನಾಯಕ ನೆಮ್ ಖಾಸಿಮ್ , ಸಂಘಟನೆಯ ಸರ್ವೋಚ್ಛ ನಾಯಕನ ಸ್ಥಾನವನ್ನು ತೊರೆದಿದ್ದು, ಜೊತೆಗೆ ಹೆಜ್ಬೊಲ್ಲಾ ಸಂಘಟನೆಯ ಸಹವಾಸವೇ ಬೇಡ ಎಂದು ಹೇಳಿದ್ದಾರೆ.
ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ.
ಈ ಹಿಂದೆ ಹೆಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಹತರಾಗಿದ್ದರು.
ಇದೀಗ ಹೆಜ್ಬೊಲ್ಲಾದ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾಹ್ ನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿವೆ.
ಅತ್ತ ಹೆಜ್ಬೊಲ್ಲಾ ನಾಯಕರ ನಾಪತ್ತೆ ಬೆನ್ನಲ್ಲೇಪ್ರಾಣಭೀತಿಯಲ್ಲಿ ಸಮಯ ಕಳೆಯುತ್ತಿರುವ ಹೆಜ್ಬೊಲ್ಲಾದ ಮತ್ತೋರ್ವ ಹಿರಿಯ ನಾಯಕ ನೆಮ್ ಖಾಸಿಮ್ ತಾನು ಸಂಘಟನೆಯ ಸರ್ವೋಚ್ಛ ನಾಯಕ ಸ್ಥಾನ ವಹಿಸಿಕೊಳ್ಳುವುದಿಲ್ಲ.. ಅಲ್ಲದೆ ತಾನು ಸಂಘಟನೆಯಲ್ಲೇ ಇರುವುದಿಲ್ಲ ಎಂದು ಹೇಳಿ ತನ್ನ ಹಾಲಿ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾನೆ .
ನೆಮ್ ಖಾಸಿಮ್ 1991ರಿಂದಲೂ ಹೆಜ್ಬೊಲ್ಲಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಸಂಘಟನೆಯ ಸರ್ವೋಚ್ಛ ನಾಯಕರು ಹತರಾಗಿ ಕೆಲ ನಾಯಕರು ನಾಪತ್ತೆಯಾಗುತ್ತಿದ್ದಂತೆಯೇ ಈತನ ಹೆಸರು ಸಂಘಟನೆಯ ಸರ್ವೋಚ್ಛ ನಾಯಕ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ತನಗೆ ಯಾವ ಸ್ಥಾನವೂ ಬೇಡ ಎಂದು ಹೇಳಿರುವ ಖಾಸಿಮ್ ತಾನು ಸಂಘಟನೆಯನ್ನೇ ತೊರೆಯುತ್ತಿರುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾನೆ.
ಇನ್ನು ಇಸ್ರೇಲ್ ವಾಯುದಾಳಿಗೆ ಹೆಜ್ಬೊಲ್ಲಾ ನಾಯಕರು ಯಾವ ಮಟ್ಟಿಗೆ ಬೆಚ್ಚಿ ಬಿದ್ದಿದ್ದಾರೆ ಎಂದರೆ, ಇಂದು ವಿಡಿಯೋ ಬಿಡುಗಡೆ ಮಾಡಿರುವ ನೇಮ್ ಖಾಸಿಮ್ ವಿಡಿಯೋ ಮಾಡುತ್ತಲೇ ಭಯದಿಂದ ಬೆವರೊರೆಸಿಕೊಳ್ಳುತ್ತಿರುವುದು ದಾಖಲಾಗಿದೆ. ಯಾವಕ್ಷಣದಲ್ಲಿ ಎಲ್ಲಿ ಬಾಂಬ್ ಸ್ಫೋಟವಾಗುತ್ತದೋ ಎಂದು ಖಾಸಿಮ್ ಪ್ರಾಣಭೀತಿಯಿಂದಲೇ ವಿಡಿಯೋದಲ್ಲಿ ಮಾತನಾಡುತ್ತಿರುವು ಕಂಡುಬಂದಿದೆ.