ಗೋಲನ್ ಹೈಟ್ಸ್ ದಾಳಿಗೆ ಹಿಜ್ಬುಲ್ಲಾ ಭಾರೀ ಬೆಲೆ ತೆರಲಿದೆ: ನೆತನ್ಯಾಹು ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ನಿಯಂತ್ರಿತ ಗೋಲನ್ ಹೈಟ್ಸ್ ಪ್ರದೇಶದಲ್ಲಿ 11 ಯುವಕರನ್ನು ಕೊಂದ ರಾಕೆಟ್ ದಾಳಿಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

“ಇಸ್ರೇಲ್ ಈ ಮಾರಣಾಂತಿಕ ದಾಳಿಯನ್ನು ಉತ್ತರಿಸದೆ ಬಿಡುವುದಿಲ್ಲ ಮತ್ತು ಹಿಜ್ಬುಲ್ಲಾ ಅದಕ್ಕೆ ಭಾರೀ ಬೆಲೆಯನ್ನು ತೆರಲಿದೆ ಎಂದು ನೆತನ್ಯಾಹು ಸ್ಥಳೀಯ ಸಮುದಾಯದ ನಾಯಕನಿಗೆ ತಿಳಿಸಿದ್ದಾರೆ.

ಇದಲ್ಲದೆ, ನೆತನ್ಯಾಹು ಅವರು ಯುನೈಟೆಡ್ ಸ್ಟೇಟ್ಸ್‌ನಿಂದ ‘ಸಾಧ್ಯವಾದಷ್ಟು ಬೇಗ’ ಮರಳಲು ನಿರ್ಧರಿಸಿದ್ದಾರೆ ಎಂದು ಇಸ್ರೇಲಿ ಪ್ರಧಾನ ಕಚೇರಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!