ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ: ದಂಪತಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬೆಂಗಳೂರಿನಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಗಳನ್ನು ಸಿಸಿಬಿ ದಾಳಿ ನಡೆಸಿ ಬಂಧಿಸಿದ್ದಾರೆ.

ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿ. ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿಗಳಾದ ಆರೋಪಿಗಳು ರಾಕೇಶ್, ಪೂಜಾ ಎಂದು ಹೆಸರು ಬದಲಿಸಿಕೊಂಡು ದಂಧೆ ನಡೆಸುತ್ತಿದ್ದರು.

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉತ್ತರ ಕರ್ನಾಟಕ ಮೂಲದ ಬಡ ಯುವತಿಯವರಿಗೆ ದುಪ್ಪಟ್ಟು ಹಣದ ಆಮಿಷೆ ತೋರಿಸಿ ನಗರಕ್ಕೆ ಕರೆತರುತ್ತಿದ್ದ ಆರೋಪಿಗಳು, ಬಳಿಕ ಹೊರರಾಜ್ಯದ ಶ್ರೀಮಂತರು, ಉದ್ಯಮಿಗಳು, ಕಾಲೇಜು ಯುವಕರಿಗೆ ಬಡಹೆಣ್ಣುಮಕ್ಕಳನ್ನು ಮಾರಾಟ ಮಾಡುತ್ತಿದ್ದರು.

ಮದುವೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಪ್ರತಿ ವಾರಕ್ಕೊಮ್ಮೆ ಉತ್ತರ ಕರ್ನಾಟಕ ಮೂಲಕ ಬಡ ಹೆಣ್ಣಮಕ್ಕಳನ್ನು ಬೆಂಗಳೂರಿನಿಂದ ತಮಿಳನಾಡಿನ ಪಾಂಡಿಚೇರಿಗೆ ಕರೆದೊಯ್ದು ಐಷಾರಾಮಿ ರೆಸಾರ್ಟ್‌ನಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ. ರೆಸಾರ್ಟ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿ ಅಲ್ಲಿಗೆ ಬರುವವರಿಗೆ ತಲಾ 25 ಸಾವಿರದಿಂದ ಐವತ್ತು ಸಾವಿರದವರೆಗೆ ರೇಟ್ ಫಿಕ್ಸ್ ಮಾಡುತ್ತಿದ್ದರು. ಪಾರ್ಟಿಗೆ ಬಂದವರಿಗೆ ಊಟ, ಮದ್ಯ ಸರಬರಾಜು ಮಾಡುವುದು ತಡರಾತ್ರಿಯಾಗುತ್ತಿದ್ದಂತೆ ಯುವತಿಯರನ್ನು ವೇಶ್ಯಾವಾಟಿಕೆಗೆ ತೊಡಗಿಸುತ್ತಿದ್ದರು.

ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ರಾಜ್ಯದ ಯುವತಿಯರನ್ನು ಹೊರರಾಜ್ಯಕ್ಕೆ ಕರೆದೊಯ್ದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಇಂದು ಬೆಂಗಳೂರಿನಿಂದ ಯುವತಿಯರನ್ನು ತಮಿಳನಾಡಿಗೆ ಕರೆದೊಯ್ಯುವ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು.

ಸದ್ಯ ನಾಲ್ವರು ಯುವತಿರನ್ನು ರಕ್ಷಿಸಿರುವ ಪೊಲೀಸರು. ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!