ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಗಡಿಯಾಚೆಗಿನ ಸುರಂಗಗಳು ಮತ್ತು ಒಳನುಸುಳುವಿಕೆಗಳನ್ನು ಪತ್ತೆಹಚ್ಚಲು ಭಾರತ ಮತ್ತು ಪಾಕಿಸ್ತಾನ ನಡುವಿನ ನಿಯಂತ್ರಣ ರೇಖೆಯ ಉದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಗಳನ್ನು ನಿಯೋಜಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಥುವಾ ಜಿಲ್ಲೆಯ ಹಿರಾನಗರ ಸೆಕ್ಟರ್‌ನಲ್ಲಿರುವ ಗಡಿ ಹೊರಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಸ್‌ಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಹೊಸ ತಂತ್ರಜ್ಞಾನವು ಶತ್ರುಗಳ ಯಾವುದೇ ಸಂಶಯಾಸ್ಪದ ಚಲನವಲನಕ್ಕೆ ಪ್ರತಿಕ್ರಿಯಿಸಲು ಭದ್ರತಾ ಪಡೆಗಳಿಗೆ ಸಹಾಯ ಮಾಡುತ್ತದೆ. ನಾವು ಎರಡು ಮಾದರಿಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು ಗಡಿಗಳಲ್ಲಿ ನಿಯೋಜಿಸುತ್ತಿದ್ದೇವೆ ಎಂದರು.
ವರ್ಷವಿಡೀ ಗಡಿಗಳನ್ನು ಕಾಪಾಡುವಲ್ಲಿ ಬಿಎಸ್‌ಎಫ್‌ನ ಸಮರ್ಪಣೆ ಮತ್ತು ಶ್ರದ್ಧೆಯನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ.