ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಶ್ರೀರಾಮುಲು ಮುನಿಸ್ಸಿಗೆ ಹೈಕಮಾಂಡ್ ಎಂಟ್ರಿ ಆಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಫೋನ್ ಕರೆ ಮಾಡಿ ಮನವೊಲಿಕೆಗೆ ಮುಂದಾಗಿದ್ದಾರೆ.
ಶ್ರೀರಾಮುಲು ಮುನಿಸನ್ನು ತಣಿಸಲು ಇದೀಗ ಹೈಕಮಾಂಡ್ ಎಂಟ್ರಿ ಆಗಿದೆ. ದೆಹಲಿಗೆ ಬನ್ನಿ ಎಂದು ಜೆಪಿ ನಡ್ಡಾ ಶ್ರೀರಾಮುಲು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದರ ಬಗ್ಗೆ ಮನವರಿಕೆ ಮಾಡಿದ್ದಾರೆ. ಜೆಪಿ ನಡ್ಡಾಗೆ ಶ್ರೀರಾಮುಲು ಸಭೆಯಲ್ಲಿ ಏನೇನಾಯಿತು ಎಂಬುದರ ಕುರಿತು ಸಂಪೂರ್ಣವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪಕ್ಷ ಬಿಡುವ ಬಗ್ಗೆ ಹಾಗೂ ಪಕ್ಷದ ವಿರುದ್ಧವಾಗಿ ಏನು ಮಾತನಾಡಬೇಡಿ. ಯಾವುದೇ ಆತುರದ ನಿರ್ಧಾರ ಮಾಡಬೇಡಿ ಎಂದು ಜೆಪಿ ನಡ್ಡಾ ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದಾರೆ.