ಹೊಸದಿಗಂತ ವರದಿ, ತುಮಕೂರು:
ವರುಣ ಕ್ಷೇತ್ರಕ್ಕೆ ಹೋಗುವಂತೆ ಪಕ್ಷದ ಹೈಕಮಾಂಡ್ ನನಗೆ ಹೇಳಿಲ್ಲ , ಆದರೆ ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ತಮ್ಮ ಪತ್ನಿ ಜೊತೆಯಲ್ಲಿ ಇಂದು ಸಿದ್ಧಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು ಹಿರಿಯ ಶ್ರೀಗಂಧದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಮಠಾಧೀಶರ ಶ್ರೀ ಸಿದ್ಧಲಿಂಗ ಸ್ವಾಮಿಗಳವರ ಆಶೀರ್ವಾದ ಪಡೆದ ನಂತರ ಮಾಧ್ಯಮ ಜೊತೆ ಮಾತನಾಡಿದರು.
ತಾವು ಗೋವಿಂದ ರಾಮನಗರದ ಹಾಗೂ ತಮ್ಮ ಪುತ್ರಿಗೆ ಗುಬ್ಬಿಯ ಟಿಕೆಟ್ ಕೇಳಿದ್ದು ಕೊಡುವುದು ಬಿಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದರು.
ನಾನಷ್ಟೇ ಅಲ್ಲದ ಇನ್ನೂ ಐವರು ಈ ರೀತಿ ಸೀಟು ಕೇಳಿದ್ದಾರೆ, ಆದರೆ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದರು.