ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಣಿ ತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿಗೆ ಹೈಕೋರ್ಟ್ ಪೆರೋಲ್ ನೀಡಲು ನಿರಾಕರಿಸಿದೆ.
ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಉಮೇಶ್ ರೆಡ್ಡಿಯ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು ನೋಡಿಕೊಳ್ಳಲು 30 ದಿನಗಳ ಕಾಲ ಪೆರೋಲ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿ, ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ. ಉಮೇಶ್‌ಗೆ ಇಬ್ಬರು ಸಹೋದರರಿದ್ದು ತಾಯಿಯನ್ನು ನೋಡಿಕೊಳ್ಳಬಹುದು, ಕಾರಣ ಸಮರ್ಥವಾಗಿಲ್ಲ ಎಂದು ಅರ್ಜಿ ವಜಾ ಮಾಡಲಾಗಿದೆ.