ಹಿಂದಿ ಬಿಗ್​ಬಾಸ್ ನಲ್ಲಿ ಹೈ ಡ್ರಾಮಾ…: ಮೂರ್ಚೆ ಹೋಗಿ ಆಸ್ಪತ್ರೆಗೆ ದಾಖಲಾದ ನಟಿ!

ಹೊಸದಿಂತ ಡಿಜಿಟಲ್ ಡೆಸ್ಕ್:

ಹಿಂದಿ ಬಿಗ್​ಬಾಸ್ ಅಂದರೆ ಅಲ್ಲಿ ಡ್ರಾಮಾ, ಜಗಳ ಸಾಮಾನ್ಯ. ರಿಯಾಲಿಟಿ ಶೋ ಅಂದರೆ ಹಾಗೇನೇ .. ಇತ್ತ ಹಿಂದಿ ಬಿಗ್​ಬಾಸ್ ನಲ್ಲಿ ಸ್ಪರ್ಧಿಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದು ಭಾರಿ ಅವಾಂತರ ಸೃಷ್ಟಿಯಾಗಿರುವ ಘಟನೆ ನಡೆದಿದೆ.

ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ನಲ್ಲಿ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿರುವ ಆಯೇಷಾ ಖಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ, ನಟ-ನಿರೂಪಕ ಸಲ್ಮಾನ್ ಖಾನ್ ಮುನಾವರ್ ಫರುಕಿ ಮತ್ತು ಆಯೇಷಾ ಅವರ ಸಂಬಂಧವನ್ನು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಈ ಸಂದರ್ಭ ಆಯೇಷಾ ಜೋರಾಗಿ ಅತ್ತರು. ಈ ಸಮಯದಲ್ಲಿ ಅವರು ಮೂರ್ಚೆ ತಪ್ಪಿ ಬಿದ್ದರು. ನಂತರ ಅವರನ್ನು ಸಹ-ಸ್ಪರ್ಧಿಗಳು ವೈದ್ಯಕೀಯ ಕೋಣೆಗೆ ಕರೆದೊಯ್ದರು.

ಇಷ್ಟಾದ ಬಳಿಕ ಸಲ್ಮಾನ್ ಖಾನ್ ಕೂಡ ಅವರನ್ನು ಭೇಟಿ ಮಾಡಿದರು. ಆಯೇಷಾ ಖಾನ್ ಬಿಗ್ ಬಾಸ್ ಮನೆಗೆ ಪ್ರವೇಶಿಸಿದಾಗಿನಿಂದ, ಮುನಾವರ್ ಫರುಕಿ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಹೀಗೆ ಈಕೆ ಕುಸಿದು ಬೀಳುವ ಮೊದಲು ಕೂಡ ಬಿಗ್​ಬಾಸ್​ ಮನೆಯ ಗಾರ್ಡನ್ ಏರಿಯಾದಲ್ಲಿ ಆಕೆ ಒಬ್ಬಳೇ ಅಳುತ್ತಿದ್ದರು. ಆಕೆ ಮಂಕಾಗಿದ್ದನ್ನು ನೋಡಿದ ನಂತರ, ಇತರ ಸ್ಪರ್ಧಿಗಳು ಅವರನ್ನು ಪ್ರಶ್ನಿಸಿದ್ದರು. ಆದರೆ ಸಲ್ಮಾನ್​ ಖಾನ್​ ಪ್ರಶ್ನೆ ಕೇಳುತ್ತಲೇ ಅವರು ಕುಸಿದು ಬಿದ್ದರು. ನಂತರ ಸಲ್ಮಾನ್​ ಖಾನ್​ ಆಯೇಷಾಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಂತೆ ಅವರನ್ನು ಸಮಾಧಾನಪಡಿಸಿದರು.

ಇನ್ನು ಆಯೇಷಾ ಕುರಿತು ಹೇಳುವುದಾದರೆ, ಇವರು ಕಿರುತೆರೆ ನಟಿ. ‘ಕಸೌಟಿ ಜಿಂದಗಿ ಕೇ’, ‘ರಿಬಾರ್ನ್ ಹೀರ್’, ‘ಗಿಟಾರ್’, ‘ದಿಲ್ ನೆ’, ‘ಮೊಹಬ್ಬತ್ ಕೆ ಕಾಬಿಲ್’ ಮುಂತಾದ ಮ್ಯೂಸಿಕ್ ವೀಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. ‘ಬಿಗ್ ಬಾಸ್ 17’ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದರು.

ಕಾಮಿಡಿಯನ್ ಮುನಾವರ್ ಫಾರುಕಿ ಅವರ ‘ಮಾಜಿ ಗೆಳತಿ’ ಎಂದು ಹೇಳಿಕೊಂಡಿರುವ ಆಯೇಷಾ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಈ ಹಿಂದೆ ಆಯೇಷಾ ಖಾನ್ ಸಾಕಷ್ಟು ಬಾರಿ ಸ್ಯಾಂಡ್‌‌ಅಪ್‌ ಕಾಮಿಡಿಯನ್‌ ಮುನಾವರ್‌ ಫಾರುಕಿ ಬಗ್ಗೆ ಆರೋಪಗಳನ್ನು ಮಾಡಿದ್ದರು. ಜೊತೆಗೆ ಮುನಾವರ್ ಮುಖವಾಡ ಕಳಚುತ್ತೇನೆ ಎಂದು ಬಹಿರಂಗವಾಹಿ ಸವಾಲು ಹಾಕಿದ್ದರು. ಆತ ತನ್ನ ಬಳಿ ಕ್ಷಮೆ ಕೇಳಬೇಕು. ಅದೇ ಕಾರಣಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದಿದ್ದರು.

ಇದರ ಬಗ್ಗೆಯೇ ಸಲ್ಮಾನ್​ ಖಾನ್​ ಪ್ರಶ್ನೆ ಕೇಳಿದ್ದರು. ವಾರಾಂತ್ಯದ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ ಆಯೇಷಾ ಅವರು ಬಿಗ್​ಬಾಸ್​ ಮನೆಗೆ ಬಂದ ಕಾರಣವನ್ನು ಕೇಳಿದರು. ಮುನಾವರ್​ ಜೊತೆಗಿನ ಜಗಳವನ್ನು ಹೊರಗೆ ಬಳಸಿಕೊಳ್ಳಬಹುದಿತ್ತು. ಪ್ರಚಾರಕ್ಕಾಗಿ ಬಿಗ್​ಬಾಸ್​ ಮನೆಗೆ ಪ್ರವೇಶಿಸಿರುವುದಾಗಿ ಹೇಳಿದರು. ಇದನ್ನು ಆಯೇಷಾ ನಿರಾಕರಿಸಿದರು. ಆಗ ಸಲ್ಮಾನ್ ಖಾನ್​, “ಆಯೆಷಾ ಕಾರ್ಯಕ್ರಮಕ್ಕೆ ಏಕೆ ಬಂದರು ಎಂದು ನನಗೆ ಅರ್ಥವಾಗುತ್ತಿಲ್ಲ, ನೀವು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ನಿಮ್ಮಿಬ್ಬರ ಸಂಬಂಧ ಏನು ಎಂದೆಲ್ಲಾ ಪ್ರಶ್ನಿಸಿದರು. ಅಷ್ಟರಲ್ಲಿಯೇ ಆಯೇಷಾ ಮೂರ್ಚೆ ತಪ್ಪಿ ಬಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!