ಹೇಗೆ ಮಾಡೋದು?
ಮೊದಲು ಚಿಕನ್ ಬ್ರೆಸ್ಟ್ನ್ನು ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ, ಅಥವಾ ಸಣ್ಣದಾಗಿ ಕತ್ತರಿಸಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ನಿಂಬೆಹುಳಿ, ಸ್ವಲ್ಪ ಕಡ್ಲೆಹಿಟ್ಟು ಅಥವಾ ಮೊಟ್ಟೆ ಹಾಕಿ
ನಂತರ ನಿಮ್ಮಿಷ್ಟದ ಯಾವುದೇ ತರಕಾರಿ ಅಥವಾ ಸೊಪ್ಪು ಹಾಕಿ ಮಿಕ್ಸ್ ಮಾಡಿ
ಆಮೇಲೆ ಕಾದ ಹೆಂಚಿನ ಮೇಲೆ ಪ್ಯಾಟಿ ರೀತಿ ಹಾಕಿ ಎರಡೂ ಕಡೆ ಬೇಯಿಸಿದ್ರೆ ಬ್ರೇಕ್ಫಾಸ್ಟ್ ರೆಡಿ
ತರಕಾರಿ ಹಾಗೂ ಸೌತೆಕಾಯಿ ಜೊತೆ ಇದನ್ನು ಬಿಸಿ ಬಿಸಿ ತಿಂದುಬಿಡಿ