ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ದಿನಗಳಲ್ಲಿ ಬಿಸಿ ಶಾಖದ ಬೇಸಿಗೆ ಹೆಚ್ಚಾಗಿದ್ದು, ಅತಿಯಾಗಿ ಬಿಸಿಲಿಗೆ ಜನರು ಸಿದ್ಧರಾಗಬೇಕಾಗಬಹುದು.
ಈ ಬೇಸಿಗೆಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ಪರಿಸ್ಥಿತಿಗಳು ಮತ್ತು ತಾಪಮಾನ ಉಂಟಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 1901ರ ನಂತರದ ಅತ್ಯಂತ ಬಿಸಿಯಾದ ತಿಂಗಳು ಈ ವರ್ಷ ಫೆಬ್ರವರಿಯಲ್ಲಿ ಉಂಟಾಯಿತು. ಸರಾಸರಿ ತಾಪಮಾನವು 20.7° ಸೆಲ್ಸಿಯಸ್ ಗೆ ಹೋಲಿಸಿದರೆ 22.04° ಸೆಲ್ಸಿಯಸ್ ನಲ್ಲಿ ದಾಖಲಾಗಿದೆ.
ಇದು 1901 ರ ನಂತರದ ಎರಡನೇ ಅತಿ ಹೆಚ್ಚು ಗರಿಷ್ಠ ತಾಪಮಾನ ಮತ್ತು ಅತ್ಯಧಿಕ ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ಫೆಬ್ರವರಿಯಲ್ಲಿ ಮಧ್ಯ ಮತ್ತು ದಕ್ಷಿಣ ಪ್ರದೇಶಗಳು ಸಹ ಬೆಚ್ಚಗಿನ ತಾಪಮಾನ ಕಂಡುಬಂದಿದೆ. ಜನವರಿ ಮತ್ತು ಫೆಬ್ರವರಿ ನಡುವೆ ದೇಶದಲ್ಲಿ ಶೇಕಡಾ 59ರಷ್ಟು ಕೊರತೆಯ ಮಳೆಯಾಗಿದೆ. ಮಧ್ಯ ಭಾರತದಲ್ಲಿ ಶೇ. 89ರಷ್ಟು ಕೊರತೆಯ ಮಳೆಯಾಗಿದೆ, ನಂತರ ವಾಯುವ್ಯ ಭಾರತದಲ್ಲಿ ಶೇಕಡಾ 64ರಷ್ಟು ಕೊರತೆಯ ಮಳೆಯಾಗಿದೆ.