ಹೊಸದಿಗಂತ ವರದಿ ಜೋಯಿಡಾ:
ತಾಲೂಕಿನ ಕಾಸಲ ರಾಕ್ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಗುಡ್ಡ ಕುಸಿದು ಗೋವಾ ರೈಲ್ವೆ ಮಾರ್ಗ ಬಂದ್ ಆಗಿದೆ. ಇದರಿಂದಾಗಿ ಗೋವಾಕ್ಕೆ ಹೋಗುವ, ಗೋವಾದಿಂದ ಬರುವ ರೈಲು ಸಂಪರ್ಕ ಕಡಿತಗೊಂಡಿದೆ.
ರೈಲ್ವೇ ಟ್ರಾಕ್ ಕರಂಜೊಳ ಬಳಿ ಭೂ ಕುಸಿತವಾಗಿದ್ದು ಮಾರ್ಗದ ರಿಪೇರಿ ಕೆಲಸ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಗುಡ್ಡ ಕುಸಿತದಿಂದ ಕೇವಲ 5 ಕಿ.ಮೀ. ದೂರದಲ್ಲಿ ಪ್ರಖ್ಯಾತ ದೂದ್ ಸಾಗರ್ ಜಲಪಾತವಿದೆ.