ಹೊಸದಿಗಂತ ವರದಿ, ಮಂಗಳೂರು:
ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆಯ ನೆಡುವೆ ರೈಲು ಹಳಿಯ ಮೇಲೆ ಗುಡ್ಡವು ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ. ಹಾಸನ-ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ಮಧ್ಯೆ ಭೂಕುಸಿತವಾದ ಹಿನ್ನೆಯಲ್ಲಿ ಶುಕ್ರವಾರ ಮದ್ಯರಾತ್ರಿಯಿಂದ ರೈಲು ಸಂಚಾರ ಸ್ಥಗಿತಗೊಂಡಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿದರು.ಅಲ್ಲದೆ ಹಳಿಯ ಮೇಲೆ ಬಿದ್ದಿದ್ದ ಬೃಹತ್ ಪ್ರಮಾಣದ ಮಣ್ಣನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಿದರು. ಗುಡ್ಡ ಕುಸಿತದಿಂದಾಗಿ ಮಂಗಳೂರು-ಸುಬ್ರಹ್ಮಣ್ಯ ಬೆಂಗಳೂರು ಸಂಚರಿಸುವ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಯಿತು. ಸುಮಾರು 430 ಕಾರ್ಮಿಕರು ಕಾರ್ಯಾರಣೆ ಮಾಡುತ್ತಿದ್ದಾರೆ. ವಿವಿಧ ಯಂತ್ರಗಳು ಸ್ಥಳದಲ್ಲಿದೆ.ಭಾನುವಾರ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ದೋಣಿಗಲ್‌ನಲ್ಲಿ ಕುಸಿತದಿಂದ ಕೇವಲ 2 ದಿನಗಳ ಹಿಂದೆ ರೈಲು ಸಂಚಾರ ಆರಂಭವಾಗಿತ್ತು.
ಬಾಳ್ಳುಪೇಟೆ ಬಳಿ ಹಳಿಯ ಮೇಲೆ ಬೃಹತ್ ಗುಡ್ಡ ಕುಸಿದು ಭಾರೀ ಪ್ರಮಾಣದ ಮಣ್ಣು ಹಳಿಯ ಮೇಲೆ ಶೇಖರಗೊಂಡಿತ್ತು.ಇದರ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದೆ.ಸ್ಥಳದಲ್ಲಿ ಸುಮಾರು 430 ಕಾರ್ಮಿಕರು ಮಣ್ಣು ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಅಲ್ಲದೆ ಸ್ಥಳದಲ್ಲಿ ಜೆಸಿಬಿ ಯಂತ್ರಗಳು ಸೇರಿದಂತೆ ಇತರ ಯಂತ್ರಗಳನ್ನು ವ್ಯವಸ್ಥೆಗೊಳಿಸಲಾಗಿದೆ.ಅಲ್ಲದೆ ಪರಿಹಾರ ಸಾಮಾಗ್ರಿಗಳೊಂದಿಗೆ ರಕ್ಷಣಾ ತಂಡವು ಸ್ಥಳದಲ್ಲಿ ಸನ್ನದ್ಧವಾಗಿದೆ.
10 ರೈಲುಗಳು ರದ್ದು:
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಅಚಾನಕ್ ಆಗಿ ಗುಡ್ಡ ಕುಸಿದಿಂದಾಗಿ ರದ್ದುಗೊಳಿಸಲಾಗಿದೆ.ಕೆಲವು ರೈಲುಗಳು ತನ್ನ ಪ್ರಯಾಣವನ್ನು ಆರಂಭಿಸಿತ್ತು.ಆದರೆ ಮಣ್ಣು ಕುಸಿತದಿಂದ ಕೆಲವೊಂದು ರೈಲು ನಿಲ್ದಾಣಗಳಲ್ಲಿ ಅವುಗಳನ್ನು ತಡೆಯಲಾಗಿತ್ತು ಮತ್ತು ಅವುಗಳ ಪ್ರಯಾಣವನ್ನು ಅಲ್ಲಿಂದಲೇ ಶನಿವಾರ ರದ್ದುಗೊಳಿಸಲಾಗಿತ್ತು.
ಯಶವಂತಪುರ-ಮಂಗಳೂರು ಜೆಎನ್ ಎಕ್ಸ್‌ಪ್ರೆಸ್ (16539) ಪ್ರಯಾಣವನ್ನು ಚನ್ನರಾಯಪಟ್ಟಣದಲ್ಲಿ, ಕಣ್ಣೂರು – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16512)ನ್ನು ಸಕಲೇಶಪುರದಲ್ಲಿ, ಕಾರವಾರ – ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್(16596), ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್ (16596)ನ್ನು ಸಕಲೇಶಪುರದಲ್ಲಿ, ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ (16511)ನ್ನು ಆಲೂರಿನಲ್ಲಿ ನಿಲ್ದಾಣದಲ್ಲಿ, ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್ (16585), ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (07377),ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್(07378) ಪ್ರಯಾಣವನ್ನು ಹಾಸನದಲ್ಲಿ, ಕಾರವಾರ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್(16516) ಮಂಗಳೂರಿನಲ್ಲಿ, ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್(165925)ನ್ನು ಶನಿವಾರ ರದ್ದುಗೊಳಿಸಲಾಗಿತ್ತು.