August 17, 2026
Monday, August 17, 2026
spot_img

ರಾಮತೀರ್ಥ ಬಳಿಯ ಹೆದ್ದಾರಿ ಪಕ್ಕದ ಗುಡ್ಡ ಕುಸಿತ: ಕೆಲಸಮಯ ವಾಹನಗಳಿಗೆ ಸಂಚಾರಕ್ಕೆ ವ್ಯತಯ

ಹೊಸದಿಗಂತ ವರದಿ ಹೊನ್ನಾವರ:

ಪಟ್ಟಣದ ರಾಮತೀರ್ಥ ತಿರುವಿನ ಸಮೀಪ ಹೆದ್ದಾರಿ ಪಕ್ಕದ ಗುಡ್ಡ ಕುಸಿತ ಸಂಭವಿಸಿದೆ. ಕಳೆದ ಎರಡು ದಿನದಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದ ಹೆದ್ದಾರಿ ಪಕ್ಕದಲ್ಲಿರುವ ಗುಡ್ಡದ ಮಣ್ಣು ಸಡಿಲಗೊಂಡು ಕುಸಿದಿದೆ.

ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ಹಾನಿ ಸಂಭವಿಸಿಲ್ಲ. ಕಳೆದ ಕೆಲ ವರ್ಷದ ಹಿಂದೆ ಐ ಆರ್ ಬಿ ಕಂಪನಿಯವರು ಹೆದ್ದಾರಿ ಅಗಲೀಕರಣ ಮಾಡುವ ಸಮಯದಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಗುಡ್ಡದ ಮಣ್ಣು ತೆಗೆದಿರುವುದು ಕುಸಿತ ಸಂಭವಿಸಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಹೆದ್ದಾರಿ ಒಂದು ಭಾಗದ ರಸ್ತೆಯಲ್ಲಿ ಮಣ್ಣು ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಅಧಿಕಾರಿಗಳು ರಸ್ತೆ ಮೇಲೆ ಬಿದ್ದ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗುಡ್ಡ ಕುಸಿತ ಮತ್ತೆ ಸಂಭವಿಸುವ ಸಾಧ್ಯತೆ ಇರುವುದರಿಂದ ವಾಹನವನ್ನು ಏಕಮುಖ ಸಂಚಾರದ ಮೂಲಕ ಸಾಗಲು ಅನುವು ಮಾಡಿಕೊಟ್ಟಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !