ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಸೋಲನ್‌ನಲ್ಲಿರುವ ಟಿಂಬರ್ ಟ್ರಯಲ್ ರೋಪ್‌ವೇಯಲ್ಲಿ ತಾಂತ್ರಿಕ ದೋಷದಿಂದ ಟ್ರಾಲಿಯೊಂದು ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದು, ಈ ಟ್ರಾಲಿಯಲ್ಲಿದ್ದ 11 ಮಂದಿ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಪ್ರವಾಸಿಗರನ್ನು ಟ್ರಾಲಿಯಿಂದ ಹೊರಗೆ ಕರೆದೊಯ್ಯಲು ಮತ್ತೊಂದು ಕೇಬಲ್ ಕಾರ್ ಬಳಸಲಾಗುತ್ತಿದೆ. 4 ರಿಂದ 5 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಇನ್ನೂ ಕೆಲ ಪ್ರವಾಸಿಗರು ಟ್ರಾಲಿಯಲ್ಲಿಯೇ ಇದ್ದಾರೆ. ಈ ಪ್ರವಾಸಿಗರಸನ್ನು ಸ್ಥಳಾಂತರಿಸಲು ರೋಪ್‌ವೇಯ ತಾಂತ್ರಿಕ ತಜ್ಞರೊಂದಿಗೆ ಹಿಮಾಚಲ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಬಗ್ಗೆ ಸೋಲನ್ʼನ ಕಾಂಗ್ರೆಸ್ ಶಾಸಕ ಕರ್ನಲ್ ಧನಿ ರಾಮ್ ಶಾಂಡಿಲ್, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು, ಶೀಘ್ರದಲ್ಲೇ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು ಮತ್ತು ಸೈನ್ಯದ ಸಹಾಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ತಾಂತ್ರಿಕ ದೋಷದಿಂದಾಗಿ, ಈ ಕೇಬಲ್ ಕಾರು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ