ಹಿಂದಿ ಯಾವುದೇ ಭಾಷೆಗೆ ವಿರೋಧಿಯಲ್ಲ, ಎಲ್ಲಾ ಭಾರತೀಯ ಭಾಷೆಗಳಿಗೆ ಸ್ನೇಹಿ: ಅಮಿತ್​ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಭಾಷೆಗಳಿಗೆ ಹಿಂದಿಯು ಭಾಷೆಯು ಎಂದಿಗೂ ವಿರೋಧಿಯಲ್ಲ , ಬದಲಾಗಿ ಎಲ್ಲಾ ಭಾರತೀಯ ಭಾಷೆಗಳಿಗೆ ಸ್ನೇಹಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದರು.

ಕೇಂದ್ರ ಸರ್ಕಾರದ ಅಧಿಕೃತ ಭಾಷಾ ಇಲಾಖೆಯ ಸುವರ್ಣ ಸಂಭ್ರಮ ಮಹೋತ್ಸವದಲ್ಲಿ ಮಾತನಾಡಿದ ಅವರು, ಎಲ್ಲಾ ರಾಜ್ಯಗಳು ತಮ್ಮ ತಮ್ಮ ಸ್ಥಳೀಯ ಭಾಷೆಗಳಲ್ಲಿ ಇಂಜಿನಿಯರಿಂಗ್​ ಮತ್ತು ವೈದ್ಯಕೀಯ ಶಿಕ್ಷಣವನ್ನು ಕಲಿಸುವ ಕ್ರಮಕ್ಕೆ ಮುಂದಾಗಬೇಕು. ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಆಡಳಿತ ಕಾರ್ಯ ಬಳಕೆಗೆ ಕೇಂದ್ರ ಕೂಡ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದರು.

ನಾನು ನಂಬಿರುವ ಪ್ರಕಾರ, ಹಿಂದಿ ಯಾವುದೇ ಭಾಷೆಗೆ ವಿರೋಧಿಯಲ್ಲ. ಹಿಂದಿಯು ಎಲ್ಲಾ ಭಾರತೀಯ ಭಾಷೆಗಳ ಸ್ನೇಹಿಯಾಗಿದೆ. ಹಿಂದಿ ಮತ್ತು ಇತರೆ ಭಾರತೀಯ ಭಾಷೆಗಳು ಒಟ್ಟಾಗಿ ದೇಶದ ಸಾಂಸ್ಕೃತಿಕತೆಯ ಸ್ವಾಭಿಮಾನವನ್ನು ಉನ್ನತ ಹಂತಕ್ಕೆ ಕೊಂಡೊಯ್ಯಬಹುದು ಎಂದು ಅಮಿತ್​ ಶಾ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ಜನರು ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು. ಭಾಷೆ ನಮ್ಮ ಆತ್ಮವಾಗಿದೆ. ಯಾವ ವ್ಯಕ್ತಿ ಆತ ಮಾತೃ ಭಾಷೆಯಲ್ಲಿ ಆತನ ಅಭಿವ್ಯಕ್ತಿಯನ್ನು ಹೇಳಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಆತ ಜೀತ ಮನಸ್ಥಿತಿಯಿಂದ ಮುಕ್ತನಾಗಲು ಸಾಧ್ಯವಿಲ್ಲ. ಇತಿಹಾಸ ಮತ್ತು ಸಂಸ್ಕೃತಿಯನ್ನು ಅವರದೇ ಆದ ಮಾತೃ ಭಾಷೆಯಲ್ಲಿ ಪರಿಪೂರ್ಣವಾಗಿ ಹೇಳಲು ಸಾಧ್ಯ ಎಂದು ಶಾ ಪ್ರತಿಪಾದಿಸಿದರು.

ವಿದೇಶಿ ಭಾಷೆಗಳಿಗೂ ದೇಶದಲ್ಲಿ ವಿರೋಧವಿಲ್ಲ. ಯಾವುದೇ ಭಾಷೆ ಬೆಳವಣಿಗೆಗೆ ನಿರ್ಬಂಧವಿಲ್ಲ. ಆದರೆ, ನಮ್ಮ ಭಾಷೆಯನ್ನು ಬೆಳಗಿಸುವ ಕಾರ್ಯಕ್ಕೆ ಮುಂದಾಗಬೇಕು. ಪ್ರತಿಯೊಬ್ಬರು ಅವರದ್ದೇ ಮಾತೃ ಭಾಷೆಯಲ್ಲಿ ಮಾತನಾಡಬೇಕು. ನಿಮ್ಮದೇ ಭಾಷೆಯಲ್ಲಿ ಯೋಚಿಸಲು ಮುಂದಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!