ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಶರಿಯತ್‌ಪುರ ಜಿಲ್ಲೆಯಲ್ಲಿ ಹಿಂದು ಉದ್ಯಮಿಯೊಬ್ಬರನ್ನು ಕಡಿದು ಸುಟ್ಟು ಕೊಂದ ಪ್ರಕರಣದಲ್ಲಿ ಭಾನುವಾರ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಢಾಕಾದಿಂದ ಸುಮಾರು 100 ಕಿಲೋಮೀಟರ್ ದಕ್ಷಿಣದಲ್ಲಿರುವ ಶರಿಯತ್‌ಪುರ ಜಿಲ್ಲೆಯ ದಮುದ್ಯದಲ್ಲಿರುವ ಕುರ್ಭಂಗಾ ಬಜಾರ್ ಬಳಿ ಬುಧವಾರ ರಾತ್ರಿ 50 ವರ್ಷದ ಕೊಂಕನ್ ಚಂದ್ರ ದಾಸ್ ಮೇಲೆ ಹಲ್ಲೆ ನಡೆಸಿದ್ದು. ಅವರು ಶನಿವಾರ ನಿಧನರಾದರು.
ಕ್ಷಿಪ್ರ ಕಾರ್ಯಾಚರಣಾ ಬೆಟಾಲಿಯನ್ (RAB) ತಂಡವು ಭಾನುವಾರ ಬೆಳಿಗ್ಗೆ ಢಾಕಾದಿಂದ ಸುಮಾರು 100 ಕಿಲೋಮೀಟರ್ ಈಶಾನ್ಯಕ್ಕೆ ಕಿಶೋರ್‌ಗಂಜ್‌ನಿಂದ ಮೂವರು ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ದಾಮುದ್ಯಾರ್ ಸೊಹಾಗ್ ಖಾನ್ (27), ರಬ್ಬಿ ಮೊಲ್ಯ (21) ಮತ್ತು ಪಲಾಶ್ ಸರ್ದಾರ್ (25) ಎಂದು ಗುರುತಿಸಲಾಗಿದೆ.

