ಮುಂಡಗೋಡದಲ್ಲಿ ಗೋಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ವರದಿ ಮುಂಡಗೋಡ:

ಪಟ್ಟಣದಲ್ಲಿ ಗೋ ಹತ್ಯೆ ಖಂಡಿಸಿ ಗುರುವಾರ ವಿವಿಧ ಹಿಂದೂ ಸಂಘಟನೆಯವರು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ  ಪ್ರತಿಭಟಿಸಿ ಕೃತ್ಯ ಎಸಗಿದವರ ಮೇಲೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸಿಪಿಐ ರಂಗನಾಥ ಅವರಿಗೆ ಮನವಿ ಸಲ್ಲಿಸಿದರು.

ಗುರುವಾರ ಬೆಳಿಗ್ಗೆ ಯಲ್ಲಾಪುರ ರಸ್ತೆಯ ರಜಾಕ್ಷಾವಲಿ ದರ್ಗಾ ಹಿಂಬದಿಯ ಕಟ್ಟಡದಲ್ಲಿ ಗೋ ಹತ್ಯೆ ಮಾಡಿದ್ದಾರೆ ಎಂಬ ವಿಷಯ ಹಿಂದೂ ಸಂಘಟನೆಯ ಮುಖಂಡರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆ ಸ್ಥಳದಲ್ಲಿದ್ದ ಗೋ ಮಾಂಸ ಇರುವುದು ಪತ್ತೆಯಾಗಿದೆ.‌ ಪೊಲೀಸರು ಮಾಂಸವನ್ನು ಜಪ್ತಿ ಮಾಡಿದರು.‌

ಹಿಂದೂ ಸಂಘಟನೆಗಳು ಆಕ್ರೋಶ: ಈ ಕೃತ್ಯ ನಡೆದಿರುವುದು ಪವಿತ್ರವಾದ ದರ್ಗಾ ಹಿಂಬದಿ ಘಟನೆಯಾಗಿದೆ.ಅಲ್ಲದೆ ಮುಸ್ಲಿಂ ‌ಸಮುದಾಯದ ಪ್ರಮುಖರು, ಧರ್ಮಾಭಿಮಾನಿಗಳ ಸಮ್ಮುಖದಲ್ಲಿ ನಡೆದಿದೆ. ಇದನ್ನು ಯಾವ ಶಬ್ದದಲ್ಲಿ ಖಂಡಿಸಬೇಕೋ ಗೊತ್ತಾಗುತ್ತಿಲ್ಲ. ಗೋ ಹತ್ಯೆ ಮಾಡಿದ  ಪಾಪಿಗೆ ಕಠಿಣ ಶಿಕ್ಷೆಯಾಗಬೇಕು.  ಆತನನ್ನು ಗಡಿಪಾರ ಮಾಡಬೇಕು. ಈ ಕೃತ್ಯದಲ್ಲಿ ನಾಲ್ಕೈದು ಜನರು ಇದ್ದಾರೆ. ಇವರ ಮೇಲೆಯೂ ಕ್ರಮವಾಗಬೇಕು. ಈ ಬಗ್ಗೆ ಪೊಲೀಸರು ಬಹಿರಂಗಪಡಿಸಬೇಕು.ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರವಾದ ಪ್ರತಿಭಟಿಸುವ ಎಚ್ಚರಿಕೆ‌ಯನ್ನು ನೀಡಿದರು.  ಮುಂದೆ ಈ ರೀತಿ ಆಗದಂತೆ  ಆ ಸಮಾಜದ ಮುಖಂಡರುಗಳಿಗೆ ಎಚ್ಚರಿಕೆ‌ ನೀಡಿ,  ಗೋ‌ ಹತ್ಯೆ ಯಾದ ಗೋ ಮಾತೆಯನ್ನು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ರಸ್ತೆ ತಡೆ ನಡೆಸಿ ಪೊಲೀಸರಿಗೆ ಮನವಿ : ಯಲ್ಲಾಪುರ ರಜಾಕ್ಷೀಯ ಮಸೀದಿ ಹಿಂಬದಿಯ ಕಟ್ಟಡದಲ್ಲಿ ಗೋ ಹತ್ಯೆ ಮಾಡಿದ್ದಾರೆ ಎಂಬ ವಿಷಯ ಪಟ್ಟಣದಲ್ಲಿ ಹರಿಡುತ್ತಿದ್ದಂತೆ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು, ಎಬಿವಿಪಿ ವಿದ್ಯಾರ್ಥಿ ಸಂಘಟೆಯವರು ಶಿವಾಜಿ ಸರ್ಕಲ್ ನಲ್ಲಿ ಕೆಲ ಸಮಯ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ  ಮೆರವಣಿಗೆ ಮೂಲಕ‌ ಇಲ್ಲಿನ ಪೊಲೀಸ ಠಾಣೆಗೆ ಬಂದು‌ ಸಿಪಿಐ  ಮನವಿ ಸಲ್ಲಿಸಿದರು. ಸಿಪಿಐ ರಂಗನಾಥರ ನೀಲಮ್ಮನವರ ಮನವಿ ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖಂಡರಗಳಿಗೆ ಭರವಸೆ ನೀಡಿದರು.

ಹಿಂದೂ ಸಂಘಟನೆಯ ಪ್ರಮುಖರಾದರಾದ ಪ್ರಕಾಶ ಬಡಿಗೇರ, ಶಂಕರ ಲಮಾಣಿ, ಮಂಜುನಾಥ ಎಚ್.ಪಿ ತಂಗಮ್ ಚಿನ್ನನ್ ಅಯ್ಯಪ್ಪ ಭಜಂತ್ರಿ, ಬಿಜೆಪಿ‌ ಮಂಡಳ ಅಧ್ಯಕ್ಷ ಮಂಜುನಾಥ ಪಾಟೀಲ, ಮುಖಂಡರಾದ ಫಣಿರಾಜ ಹದಳಗಿ, ಶೇಖರ ಲಮಾಣಿ, ಸುರೇಶ ಕಲ್ಲೋಳ್ಳಿ,  ಭರತ ಹದಳಗಿ,  ಬಾಬು ವಾಲ್ಮೀಕಿ, ರಾಜೇಶರಾವ್, ಮಂಜುನಾಥ ಶೇಟ್ ನಾಗರಾಜ ಹದಳಗಿ ಸೇರಿದಂತೆ ಇತರರಿದ್ದರು. ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!