ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ನಿಷೇಧ ತೆರವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲು ಹಾಕಿ ಶಾಲಾ-ಕಾಲೇಜಿಗೆ ತೆರಳಿ ಎಂದು ಬಸನಗೌಡ ಪಾಟೀಲ ಯತ್ನಾಳ್ ಕರೆ ನೀಡಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೇಳಿದ್ದಾರೆ ಬಟ್ಟೆ ಅನ್ನೋದು ಅವರವರ ಇಷ್ಟವಂತೆ, ಹಾಗಾಗಿ ಹಿಂದೂಗಳು ಇನ್ಮುಂದೆ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ತೆರಳಬಹುದು. ಮುಸ್ಲಿಮರಿಗಿಲ್ಲದ ಸಮವಸ್ತ್ರ ನೀತಿ ನಮಗೂ ಇಲ್ಲ ಎಂದು ಹೇಳಿದ್ದಾರೆ.
ಹಿಜಾಬ್ ನಿಷೇಧ ವಾಪಾಸ್ ಬಗ್ಗೆ ಸಿಎಂ ಮಾತನಾಡಿದ್ದು, ಇಡೀ ರಾಜ್ಯದಲ್ಲಿ ಮತ್ತೆ ದೊಡ್ಡ ಸುದ್ದಿಯಾಗಿದೆ. ಇದರ ಪರ ವಿರೋಧ ವ್ಯಕ್ತವಾಗಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರನೀತಿ ಇರಬೇಕು ಎಂದು ಹಲವರು ಹೇಳುತ್ತಿದ್ದರೆ, ಕೆಲವರು ಬಟ್ಟೆ ವೈಯಕ್ತಿಕ ಅವರವರ ಇಷ್ಟ ಎನ್ನುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ವರ್ಗವನ್ನು ತುಷ್ಟೀಕರಣ ಮಾಡಲು ಹೊರಟಿದ್ದಾರೆ. ದೇಶದಲ್ಲಿರುವ ಹಿಂದುಗಳು ಯಾರೂ ಸಿದ್ದರಾಮಯ್ಯ ನವರಿಗೆ ಮತ ಹಾಕುವದಿಲ್ಲ. ಟಿಪ್ಪು ಸುಲ್ತಾನ್ ನಂತರ ಎರಡನೇ ಅವತಾರವೇ ಸಿದ್ದರಾಮಯ್ಯನವರು ಎಂದು ಕಿಡಿಕಾರಿದರು.