ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತೀವ್ರವಾಗಿ ಖಂಡಿಸಿದ್ದಾರೆ.
ಎಲ್ಲಾ ಹಿಂದುಗಳು ಜಾಗೃತರಾಗಿರಬೇಕು. ನಮ್ಮ ಹೆಣ್ಣು ಮಕ್ಕಳು, ಧರ್ಮ, ದೇವಸ್ಥಾನಗಳನ್ನು ರಕ್ಷಿಸಿಕೊಳ್ಳಬೇಕು. ಇಂದು ಕಾಶ್ಮೀರದಲ್ಲಿ ದಾಳಿ ನಡೆದಿದೆ, ಮುಂದೊಂದು ದಿನ ನಮ್ಮ ಊರಿನಲ್ಲಿ ಆಗಬಹುದು. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ನಾವು ಭಾರತೀಯರು ಶಾಂತಿ ಪ್ರಿಯರು. ನಮ್ಮ ದೇಶದಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳು. ಆದರೆ, ಬೇರೆ ದೇಶಗಳಿಂದ ಬಂದವರು ನಮ್ಮಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಅಶಾಂತಿ ಮತ್ತು ದುಷ್ಕೃತ್ಯಗಳನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ಭಾರತೀಯರು ಒಂದಾಗಿ ಎದುರಿಸಬೇಕು ಎಂದು ಕರೆ ನೀಡಿದರು.
ಮೃತರ ಕುಟುಂಬಗಳಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಸಾದ ರೂಪದಲ್ಲಿ ಮೂರು ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುತ್ತಿದ್ದು, ಹಣದಿಂದ ಮೃತರು ವಾಪಸ್ ಬರುವುದಿಲ್ಲ, ಆದರೆ ಈ ಕುಟುಂಬಗಳ ಬೆಂಬಲಕ್ಕೆ ನಾವು ಇದ್ದೇವೆ ಎಂದು ತೀರ್ಥರು ಭರವಸೆ ನೀಡಿದರು.