BIG NEWS | ಇಸ್ರೋದಿಂದ ಐತಿಹಾಸಿಕ ಸಾಧನೆ: ಅಂತಿಮ ಕಕ್ಷೆಗೆ ತಲುಪಿದ ಆದಿತ್ಯ ಎಲ್1!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ನೆಟ್ಟಿದೆ. ಸೆಪ್ಟೆಂಬರ್‌ 2 ರಂದು ಉಡಾವಣೆಯಾಗಿದ್ದ ಆದಿತ್ಯ ಎಲ್‌-1 ನೌಕೆ ಅಂದಾಜು 15 ಲಕ್ಷ ಕಿಲೋಮೀಟರ್‌ ದೂರ ಸಂಚಾರ ಮಾಡಿ ಶನಿವಾರ ತನ್ನ ನಿಗದಿತ ಸ್ಥಳವನ್ನು ಯಶಸ್ವಿಯಾಗಿ ತಲುಪಿದೆ.

ಅಂದಾಜು 126 ದಿಗಳ ಕಾಲ 15 ಲಕ್ಷ ಕಿಲೋಮೀಟರ್‌ ಪ್ರಯಾಣ ಮಾಡಿದ ನೌಕೆ, ಸಂಜೆ 4 ಗಂಟೆಯ ವೇಳೆಗೆ ತನ್ನ ಗಮ್ಯ ಸ್ಥನವನ್ನು ತಲುಪಿತು.

ಇದೇ ಸ್ಥಳದಲ್ಲಿ ಮುಂದಿನ 5 ವರ್ಷಗಳ ಕಾಲ ಭಾರತದಿಂದ ಸೂರ್ಯ ಕಣ್ಣಾಗಿ ಅಧ್ಯಯನ ಮಾಡಲಿದೆ. ಅದರೊಂದಿಗೆ ಬಾಹ್ಯಾಕಾಶದಲ್ಲಿರುವ ಭಾರತದ 50 ಸಾವಿರ ಕೋಟಿ ಮೌಲ್ಯದ 400ಕ್ಕೂ ಅಧಿಕ ಉಪಗ್ರಹಗಳ ರಕ್ಷಣೆಯ ಕೆಲಸವನ್ನೂ ಮಾಡಲಿದೆ.

ಬಾಹ್ಯಾಕಾಶ ನೌಕೆಯು 440N ಲಿಕ್ವಿಡ್ ಅಪೋಜಿ ಮೋಟಾರ್ (LAM) ಅನ್ನು ಹೊಂದಿದ್ದು, ಅದರ ಸಹಾಯದಿಂದ ಆದಿತ್ಯ-L1 ಅನ್ನು ಹಾಲೋ ಕಕ್ಷೆಗೆ ಕಳುಹಿಸಲಾಗಿದೆ. ಈ ಮೋಟಾರ್ ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್ (MOM) ನಲ್ಲಿ ಬಳಸಿದಂತೆಯೇ ಇದೆ. ಇದರ ಹೊರತಾಗಿ, ಆದಿತ್ಯ-L1 ಎಂಟು 22N ಥ್ರಸ್ಟರ್‌ಗಳನ್ನು ಮತ್ತು ನಾಲ್ಕು 10N ಥ್ರಸ್ಟರ್‌ಗಳನ್ನು ಹೊಂದಿದೆ, ಇದು ಅದರ ನಿಯಂತ್ರಣಕ್ಕೆ ಅವಶ್ಯಕವಾಗಿದೆ.

L1 ಎಂಬುದು ಬಾಹ್ಯಾಕಾಶದಲ್ಲಿ ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಬಲಗಳನ್ನು ಸಮತೋಲನಗೊಳಿಸುವ ಸ್ಥಳವಾಗಿದೆ. L1 ನ ಕಕ್ಷೆಯ ಅವಧಿಯು ಸುಮಾರು 177.86 ದಿನಗಳಾಗಿವೆ.

ಆದಿತ್ಯ L1 ಅನ್ನು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C57 ನ XL ಆವೃತ್ತಿಯ ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು. ಉಡಾವಣೆಯಾದ 63 ನಿಮಿಷಗಳು ಮತ್ತು 19 ಸೆಕೆಂಡುಗಳ ನಂತರ, ಬಾಹ್ಯಾಕಾಶ ನೌಕೆಯನ್ನು ಭೂಮಿಯ 235 ಕಿಮೀ x 19500 ಕಿಮೀ ಕಕ್ಷೆಯಲ್ಲಿ ಇರಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!