ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೆಸ್ಟ್, ಏಕದಿನ (ಒಡಿಐ), ಮತ್ತು ಟಿ20ಐ ಸ್ವರೂಪಗಳಿಗೆ ಸಂಪೂರ್ಣವಾಗಿ ಭಿನ್ನ ನಾಯಕರು ಮತ್ತು ಉಪನಾಯಕರು ಆಯ್ಕೆಯಾಗಿದ್ದಾರೆ.
ಮೂರು ಸ್ವರೂಪಗಳಿಗೆ ಭಿನ್ನ ನಾಯಕತ್ವವನ್ನು ಒಡ್ಡಿರುವುದು ತಂಡದ ದೀರ್ಘಾವಧಿಯ ಯೋಜನೆಯ ಭಾಗವಾಗಿದೆ. ಈ ವಿಭಜನೆಯು ಯುವ ಆಟಗಾರರಿಗೆ ನಾಯಕತ್ವದ ಅವಕಾಶವನ್ನು ನೀಡುವ ಗುರಿಯನ್ನು ಹೊಂದಿದೆ.
ಈ ಹಿಂದೆ ಕೇವಲ 2 ಮಾದರಿಗೆ ಮಾತ್ರ ವಿಭಿನ್ನ ನಾಯಕರಿದ್ದರು. ಇದೇ ಮೊದಲ ಬಾರಿಗೆ ಬಿಸಿಸಿಐ ಮೂರು ನಾಯಕರನ್ನ ನೇಮಕ ಮಾಡಿದೆ. ಇದು ಸಾಂಪ್ರದಾಯಿಕ ನೀತಿಗೆ ವಿರುದ್ಧವಾದರೂ ರೋಹಿತ್ ಟೆಸ್ಟ್ಗೆ ದಿಢೀರ್ ನಿವೃತ್ತಿಯಾಗಿದ್ದರಿಂದ ಅನಿವಾರ್ಯವಾಗಿ ಗಿಲ್ಗೆ ನಾಯಕತ್ವವಹಿಸಲಾಗಿದೆ.
ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ರಚನೆ ಹೀಗಿದೆ
ಟೆಸ್ಟ್: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ)
ಏಕದಿನ (ಒಡಿಐ): ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ)
ಟಿ20ಐ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ)