45 ವರ್ಷಗಳ ಬಳಿಕ ಐತಿಹಾಸಿಕ ಭೇಟಿ: ಆಗಸ್ಟ್ 21-22 ರಂದು ಪೋಲೆಂಡ್​ಗೆ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 21 ಮತ್ತು 22ರಂದು ಪೋಲೆಂಡ್ ಮತ್ತು ನಂತರ ಆಗಸ್ಟ್ 23 ರಂದು ಉಕ್ರೇನ್​​ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಈ ವಾರ ಆಗಸ್ಟ್ 21 ಮತ್ತು 22 ರಂದು ಪೋಲೆಂಡ್​ಗೆ ಅಧಿಕೃತ ಭೇಟಿ ನೀಡಲಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿ ಪೋಲೆಂಡ್​ಗೆ ಭೇಟಿ ನೀಡುತ್ತಿರುವುದರಿಂದ ಇದು ಐತಿಹಾಸಿಕ ಭೇಟಿ. ನಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವವನ್ನು ಆಚರಿಸುವ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ” ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ತನ್ಮಯ ಲಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಾಗೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರದ ಕೊನೆಯಲ್ಲಿ ಶುಕ್ರವಾರ (ಆಗಸ್ಟ್ 23) ಉಕ್ರೇನ್‌ಗೆ ಅಧಿಕೃತ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಇದು ಒಂದು ಹೆಗ್ಗುರುತಾಗಿದೆ ಮತ್ತು ಐತಿಹಾಸಿಕ ಭೇಟಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!