ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಸ್ಥಳೀಯ ನ್ಯಾಯಾಲಯವು ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಅಪಘಾತದಲ್ಲಿ ಮಹಿಳೆಯೊಬ್ಬರು 1.5 ಕಿಲೋಮೀಟರ್‌ಗೂ ಹೆಚ್ಚು ಎಳೆದೊಯ್ದು ಸಾವನ್ನಪ್ಪಿದ್ದಾರೆ. ಐಷಾರಾಮಿ ಕಾರನ್ನು ಶಿವಸೇನಾ ಮುಖಂಡರೊಬ್ಬರ ಪುತ್ರ ಮಿಹಿರ್ ಶಾ ಓಡಿಸುತ್ತಿದ್ದ ಎನ್ನಲಾಗಿದೆ.
ಘಟನೆಯ ನಂತರ ಆರೋಪಿಗೆ ಎಷ್ಟು ಜನರು ಸಹಾಯ ಮಾಡಿದ್ದಾರೆ ಮತ್ತು ಸುಮಾರು ಮೂರು ದಿನಗಳ ಕಾಲ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರು ಯಾರು ಎಂಬುದನ್ನು ಕಂಡುಹಿಡಿಯಬೇಕಿದೆ. ಆರೋಪಿಗೆ ಕಾರ್ ಡ್ರೈವಿಂಗ್ ಲೈಸೆನ್ಸ್ ಇದೆಯೇ ಎಂಬುದು ಪತ್ತೆಯಾಗಬೇಕಿದೆ. ಅಪಘಾತದ ನಂತರ ಆರೋಪಿಗಳು ಬಿಸಾಡಿದ ಕಾರಿನ ನಂಬರ್ ಪ್ಲೇಟ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.