ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ಸ್ಗೆ ರೋಚಕ ಎಂಟ್ರಿ ನೀಡಿದೆ.
ಗಯಾನಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್ಗಳಿಂದ ಸೋಲಿಸಿ ಟೀಮ್ ಇಂಡಿಯಾ 10 ವರ್ಷಗಳ ಬಳಿಕ ಮತ್ತೆ ಫೈನಲ್ಗೇರಿದೆ. ದಶಕದ ಬಳಿಕ ಭಾರತ ತಂಡ ಫೈನಲ್ಗೆ ಪ್ರವೇಶಿಸುತ್ತಿದ್ದಂತೆ ಅತ್ತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾವುಕಾರದರು.
68 ರನ್ಗಳ ಭರ್ಜರಿ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದ ಟೀಮ್ ಇಂಡಿಯಾ ಆಟಗಾರರು ಖುಷಿ ಖುಷಿಯಾಗಿ ಡ್ರೆಸ್ಸಿಂಗ್ ರೂಮ್ನತ್ತ ಮುಖ ಮಾಡಿದ್ದರು. ಆದರೆ ಅದಾಗಲೇ ಪೆವಿಲಿಯನ್ಗೆ ತೆರಳಿದ್ದ ರೋಹಿತ್ ಶರ್ಮಾ ಭಾವುಕರಾಗಿ ಅಲ್ಲೇ ಡ್ರೆಸ್ಸಿಂಗ್ ರೂಮ್ ಗ್ಯಾಲರಿಯಲ್ಲಿ ಕೂತಿದ್ದರು.
ಅಲ್ಲದೆ ಟೀಮ್ ಇಂಡಿಯಾ ಆಟಗಾರರು ಗೆದ್ದ ಖುಷಿಯಲ್ಲಿ ಆಗಮಿಸುತ್ತಿದ್ದಂತೆ ಅತ್ತ ರೋಹಿತ್ ಶರ್ಮಾ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡು ಬಂತು. ಇದೀಗ ಟೀಮ್ ಇಂಡಿಯಾ ನಾಯಕ ಕಣ್ಣೀರು ಹಾಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Pure emotions 💙#ViratKohli #RohitSharma #T20WorldCup #INDvENG pic.twitter.com/a3ZZcCFnUP
— Sportskeeda (@Sportskeeda) June 27, 2024