ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಮಧ್ಯಪ್ರದೇಶ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ತಮ್ಮ ಸಂಪುಟದಲ್ಲಿ ಮೂವರಿಗೆ ಸ್ಥಾನ ಕಲ್ಪಿಸಿದ್ದಾರೆ. ಭೋಪಾಲ್ ನಗರದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂವರು ಶಾಸಕರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.
ಚೌಹಾಣ್ ಅವರ ಸಂಪುಟದಲ್ಲಿ ಪ್ರಸ್ತುತ 31 ಸದಸ್ಯರಿದ್ದಾರೆ. ಶನಿವಾರ ಸಚಿವರಾಗಿ ರಾಜೇಂದ್ರ ಶುಕ್ಲಾ, ಗೌರಿಶಂಕರ್ ಬಿಸೆನ್ ಮತ್ತು ರಾಹುಲ್ ಲೋಧಿ ಪ್ರಮಾಣ ವಚನ ಸ್ವೀಕರಿಸಿದರು. ನಾಲ್ಕು ಬಾರಿ ಶಾಸಕರಾಗಿದ್ದ ವಿಂಧ್ ಪ್ರದೇಶದ ಶಾಸಕ ರಾಜೇಂದ್ರ ಶುಕ್ಲಾ ಅವರಿಗೆ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ರಜಪೂತ ನಾಯಕ ಗೌರಿ ಶಂಕರ್ ಬಿಸೆನ್ ಸಂಪುಟ ಸಚಿವರಾಗಿ ಸೇರಿಕೊಂಡರು. ಒಬಿಸಿ ನಾಯಕ ರಾಹುಲ್ ಲೋಧಿ ಅವರನ್ನು ಸಿಎಂ ಚೌಹಾಣ್ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.