ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯಾ ವಿರುದ್ಧ ಇಂದಿನಿಂದ ಆರಂಭವಾದ 5 ಪಂದ್ಯಗಳ ಟೆಸ್ಟ್ ಹಾಕಿ ಸರಣಿಯ ಪ್ರಥಮ ಸೆಣಸಾಟದಲ್ಲಿ ಭಾರತ 4-5 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.
ಅಡಿಲೇಡ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಕೊನೆಯ ಕ್ಷಣದಲ್ಲಿ ಚುರುಕಿನ ಪ್ರದರ್ಶನನೀಡಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು.
ಭಾರತದ ಆಕಾಶದೀಪ್ ಸಿಂಗ್ 10ನೇ, 27ನೇ, 59ನೇ ನಿಮಿಷದಲ್ಲಿ ಮೂರು ಗೋಲು ಬಾರಿಸಿ ಕಾಂಗರೂಗಳ ನಿದ್ದೆಗೆಡಿಸಿದರು.
ಅಂತಿಮ ಕ್ಷಣ 4- 4 ಗೋಲುಗಳಿಂದ ಪಂದ್ಯ ಇನ್ನೇನು ಡ್ರಾ ಆಗಲಿದೆ ಎಂದು ಭಾವಿಸಿದ್ದ ಆಟಗಾರರಿಗೆ ಕಾಂಗರೂ ಪಡೆಯ ಬ್ಲೇಕ್ ಗೋವರ್ಸ್ ಶಾಕ್ ನೀಡಿ ಪಂದ್ಯ ಮುಗಿಯುವ ಕೊನೆಯ ಕ್ಷಣದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಮಾಡಿ 5-4 ರಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿದರು.