ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರ ಪ್ರಾಣಪ್ರತಿಷ್ಠೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ, ಈಗಾಗಲೇ ವಿಧಿವಿಧಾನಗಳು ಆರಂಭವಾಗಿವೆ. ಪ್ರಾಣಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಉತ್ಸುಕವಾಗಿದ್ದು, ಬೇರೆ ದೇಶಗಳಲ್ಲಿ ಪ್ರತಿಷ್ಠೆ ವೀಕ್ಷಿಸಲು ಎರಡು ಗಂಟೆಗಳ ರಜೆ ಘೋಷಣೆ ಮಾಡಲಾಗಿದೆ.
ಇನ್ನು ಭಾರತದಲ್ಲಿ ರಾಷ್ಟ್ರೀಯ ದಿನ ಎಂದು ಘೋಷಿಸಿ ರಜೆ ನೀಡಲು ಮನವಿ ಮಾಡಲಾಗಿದೆ. ಈಗಾಗಲೇ ಪ್ರಾಣಪ್ರತಿಷ್ಠೆ ದಿನದಂದು ಭಾರತದ ಈ ಐದು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆದೇಶದಂತೆ ಜನವರಿ 22 ರಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಮಧ್ಯಪ್ರದೇಶದಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಇಡೀ ದಿನ ಡ್ರೈ ಡೇ ಘೋಷಣೆ ಮಾಡಲಾಗಿದೆ. ಗೋವಾದಲ್ಲಿಯೂ ಸರ್ಕಾರಿ ನೌಕರರು ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಛತ್ತೀಸ್‌ಗಢ ಹಾಗೂ ಹರಿಯಾಣದಲ್ಲಿಯೂ ಜನವರಿ 22ರಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಈ ಎಲ್ಲ ರಾಜ್ಯಗಳಲ್ಲಿಯೂ ಪ್ರಾಣಪ್ರತಿಷ್ಠಾಪನೆ ದಿನದಂದು ಮದ್ಯದಂಗಡಿಗಳೂ ಬಂದ್ ಆಗಲಿವೆ.