ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಪ್ ಗನ್, ವಿಲೋ ಮತ್ತು ದಿ ಡೋರ್ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟ ವಾಲ್ ಕಿಲ್ಮರ್, 65ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ವಾಲ್ ಕಿಲ್ಮರ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಿನ್ನೆ ವಾಲ್ ಕಿಲ್ಮರ್ ಅವರು ಲಾಸ್ ಏಂಜಲೀಸ್‌ನಲ್ಲಿ ವಿಧಿವಶರಾಗಿದ್ದಾರೆ. ಈ ವಿಚಾರವನ್ನು ಅವರ ಪುತ್ರಿ ಮರ್ಸಿಡಿಸ್ ಕಿಲ್ಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
’ಬ್ಯಾಟ್‌ಮ್ಯಾನ್ ಫಾರೆವರ್’ ಮತ್ತು ’ಜಿಮ್ ಮೊರಿಸನ್’ ಪಾತ್ರಗಳಿಂದ ವಾಲ್ ಕಿಲ್ಮರ್ ಫೇಮಸ್ ಆಗಿದ್ದರು. ಪ್ರತಿಭಾನ್ವಿತ ನಟ ನಿಧನವಾಗಿರುವ ಸುದ್ದಿ ತಿಳಿದು ಹಾಲಿವುಡ್ ಚಿತ್ರರಂಗ, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.