February 28, 2026
Saturday, February 28, 2026
spot_img

ಸಪ್ತಸಾಗರ ದಾಟಿ ಹೊರಟ ಹೊಂಬಾಳೆ ಫಿಲಮ್ಸ್: ಓವರ್‌ಸೀಸ್ ಡಿಸ್ಟ್ರಿಬ್ಯೂಷನ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲಮ್ಸ್ ಇದೀಗ ಜಾಗತಿಕ ವಿಸ್ತರಣೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ‘ಕೆಜಿಎಫ್’ ಸರಣಿ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡ ನಿರ್ಮಾಣ ಸಂಸ್ಥೆ, ಇನ್ನು ಮುಂದೆ ವಿದೇಶಿ ವಿತರಣಾ ಕ್ಷೇತ್ರಕ್ಕೂ ಪ್ರವೇಶಿಸುವುದಾಗಿ ಘೋಷಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ, ಭಾರತೀಯ ಸಿನಿಮಾಗಳನ್ನು ಗಡಿಗಳಾಚೆಗೆ ತಲುಪಿಸುವ ಉದ್ದೇಶದಿಂದ ಓವರ್‌ಸೀಸ್ ಡಿಸ್ಟ್ರಿಬ್ಯೂಷನ್ ಆರಂಭಿಸುತ್ತಿರುವುದಾಗಿ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾದರೂ, ಸಮರ್ಪಕ ವಿತರಣಾ ವ್ಯವಸ್ಥೆಯ ಕೊರತೆ ಎದುರಾಗುತ್ತಿದೆ. ಈ ಅಗತ್ಯವನ್ನು ಮನಗಂಡು ಸಂಸ್ಥೆ ತನ್ನದೇ ಜಾಗತಿಕ ನೆಟ್‌ವರ್ಕ್ ನಿರ್ಮಿಸಲು ಮುಂದಾಗಿದೆ.

ಇದನ್ನೂ ಓದಿ:

ನಿರ್ಮಾಣದ ದೃಷ್ಟಿಯಿಂದಲೂ ಹೊಂಬಾಳೆ ಮುಂದಿನ ದಿನಗಳಲ್ಲಿ ‘ಸಲಾರ್ 2’, ಪ್ರಶಾಂತ್ ವರ್ಮಾ ನಿರ್ದೇಶನದ ಪ್ರಭಾಸ್ ಅಭಿನಯದ ಹೊಸ ಚಿತ್ರ, ‘ರಿಚರ್ಡ್ ಆಂಟೊನಿ’ ಸೇರಿದಂತೆ ಹಲವು ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಿದ್ಧವಾಗಿದೆ. ಜೊತೆಗೆ ‘ಕಾಂತಾರ ಚಾಪ್ಟರ್ 2’ ಹಾಗೂ ‘ಕೆಜಿಎಫ್ 3’ ಕೂಡ ಲೈನಪ್‌ನಲ್ಲಿ ಇರುವುದಾಗಿ ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !