October 10, 2026
Saturday, October 10, 2026
spot_img

ಕೋಚ್ ಮಾತುಗಳೇ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದು: ವಿಜಯದ ಸಿಕ್ರೇಟ್ ರಿವೀಲ್ ಮಾಡಿದ ತಿಲಕ್ ವರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್-8 ಹಂತದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದ ಟೀಮ್ ಇಂಡಿಯಾ ನಿರ್ಣಾಯಕ ಕ್ಷಣದಲ್ಲಿ ತನ್ನ ಸಾಮರ್ಥ್ಯ ತೋರಿಸಿ ಮಹತ್ವದ ಗೆಲುವು ಸಾಧಿಸಿದೆ. ಜಿಂಬಾಬ್ವೆ ವಿರುದ್ಧ 72 ರನ್‌ಗಳ ಅಂತರದ ಜಯ ಸಾಧಿಸುವ ಮೂಲಕ ಭಾರತ ಸೆಮಿಫೈನಲ್ ಪ್ರವೇಶದ ಸಾಧ್ಯತೆಯನ್ನು ಉಳಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿತು. ಬ್ಯಾಟರ್‌ಗಳ ಆಕ್ರಮಣಕಾರಿ ಪ್ರದರ್ಶನ ತಂಡಕ್ಕೆ ಭದ್ರ ಅಂಕೆಯನ್ನು ನೀಡಿತು. ನಂತರ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿ ಜಿಂಬಾಬ್ವೆ ತಂಡವನ್ನು 20 ಓವರ್‌ಗಳಲ್ಲಿ 184 ರನ್‌ಗಳಿಗೆ ಸೀಮಿತಗೊಳಿಸಿದರು.

ಇದನ್ನೂ ಓದಿ:

ಪಂದ್ಯದ ನಂತರ ಮಾತನಾಡಿದ ತಿಲಕ್ ವರ್ಮಾ, ಗೆಲುವಿನ ಹಿಂದೆ ಇರುವ ಸಿದ್ಧತೆಯನ್ನು ಬಹಿರಂಗಪಡಿಸಿದರು. ಕಳೆದ ವರ್ಷದ ಟಿ20 ಪಂದ್ಯಗಳ ವಿಡಿಯೋಗಳನ್ನು ಪಂದ್ಯಕ್ಕೂ ಮುನ್ನ ವೀಕ್ಷಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎಂದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪ್ರೇರಣಾದಾಯಕ ಮಾತುಗಳು ಕೂಡ ಆಟಗಾರರ ಮನೋಭಾವವನ್ನು ಬಲಪಡಿಸಿತು ಎಂದು ತಿಳಿಸಿದರು.

ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಆಕ್ರಮಣಕಾರಿ ಮನೋಭಾವವನ್ನು ಕೈಬಿಡದಿರುವುದು ನಮ್ಮ ಯಶಸ್ಸಿನ ಗುಟ್ಟು ಎಂದು ತಿಲಕ್ ಹೇಳಿದ್ದಾರೆ.

Must Read