ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ತಾಯಿ ನನಗೆ ಹೊಡೆದಿದ್ದಾರೆ ಕೂಡಲೇ ಅವಳನ್ನು ಬಂಧಿಸಿ ಜೈಲಿಗೆ ಹಾಕಿ ಎಂದು ಮೂರು ವರ್ಷದ ಪುಟಾಣಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ, ಬಾಲಕನ ಮುಗ್ಧತೆ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
ಈ ನಡುವೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಈ ವಿಡಿಯೋವನ್ನು ನೋಡಿದ್ದು, ಬಾಲಕನಿಗೆ ಫಿದಾ ಆಗಿದ್ದಾರೆ. ಮಗುವಿನ ಈ ಕಾರ್ಯಕ್ಕೆ ಮನಸೋತ ಸಚಿವರು ದೀಪಾವಳಿ ಉಡುಗೊರೆಯಾಗಿ ಬಾಲಕನಿಗೆ ಸೈಕಲ್ ನೀಡಿದ್ದಾರೆ. ಅಲ್ಲದೆ ಬಾಲಕನೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದಾರೆ.
ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ದೇಧ್ ತಲೈ ಗ್ರಾಮದ ಮೂರು ವರ್ಷದ ಬಾಲಕ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿಯ ವಿರುದ್ಧ ದೂರು ನೀಡಿದ್ದ. ಅಮ್ಮ ನನಗೆ ಚಾಕ್ಲೆಟ್ ತಿನ್ನಲು ಬಿಡುವುದಿಲ್ಲ. ಕೆನ್ನೆಗೆ ಹೊಡೆದಿದ್ದಾಳೆ. ಅವಳನ್ನು ಜೈಲಿಗೆ ಹಾಕಿ ಎಂದು ಬುರ್ಹಾನಪುರ ದೆಡತಲಾಯಿ ಪೊಲೀಸ್ ಠಾಣೆಯಲ್ಲಿ ಬಾಲಕ ಭಾನುವಾರ ತನ್ನ ತಂದೆಯೊಂದಿಗೆ ತೆರಳಿ ದೂರು ನೀಡಿದ್ದ.