Home Remedies | ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದೀರಾ? ಈ ಸಮಸ್ಯೆಗೆ ಮನೆಮದ್ದುಗಳಿಂದ ಪರಿಹಾರ ಸಾಧ್ಯ!

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಬಹಳಷ್ಟು ಜನ ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನ್‌ಗಳಿಗೆ ಒಡ್ಡಿಕೊಳ್ಳುವಂತೆ ಆಗಿದೆ. ಇದರ ಪರಿಣಾಮವಾಗಿ ಕಣ್ಣುಗಳಿಗೆ ತೊಂದರೆ, ದೇಹಕ್ಕೆ ಒತ್ತಡ ಹಾಗೂ ತಲೆನೋವು ಸಾಮಾನ್ಯ ಸಮಸ್ಯೆಗಳಾಗಿ ಪರಿಣಮಿಸುತ್ತಿವೆ. ಕೆಲವೊಮ್ಮೆ ಈ ತಲೆನೋವು ಸಾಮಾನ್ಯ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ಮೈಗ್ರೇನ್ ಆಗಿರಬಹುದು ಎಂಬುದು ನಿಮಗೆ ಗೊತ್ತ.

I have to keep away from focusing on the pain Shot of a uncomfortable looking woman holding her head in discomfort due to pain at home during the day migraine headaches stock pictures, royalty-free photos & images

ಮೈಗ್ರೇನ್‌ನ ನೋವು ಹೆಚ್ಚಾದಾಗ ಪ್ರಕಾಶಮಾನವಾದ ಬೆಳಕಿನಿಂದಾಗಿ ನೀವು ಚಡಪಡಿಕೆ, ವಾಂತಿ ಮತ್ತು ಭಯವನ್ನು ಸಹ ಅನುಭವಿಸಬಹುದು. ಈ ನೋವನ್ನು ನಿಲ್ಲಿಸಲು ಹಲವರು ಮಾತ್ರೆಗಳಿಗೆ ಅವಲಂಬಿತರಾಗುತ್ತಾರೆ. ಆದರೆ ಪ್ರತಿಸಾರಿ ಔಷಧಿಗಳಿಗೆ ಅವಲಂಬಿತವಾಗದೇ, ಕೆಲವೆಲ್ಲಾ ಮನೆಮದ್ದುಗಳನ್ನೂ ಪ್ರಯೋಗಿಸಬಹುದು.

ಶುಂಠಿ ಚಹಾ: ಸುಲಭವಾಗಿ ತಯಾರಿಸಬಹುದಾದ ಮನೆಮದ್ದುಗಳಲ್ಲೊಂದು. ಶುಂಠಿಯು ಶೀತ, ತಲೆನೋವು ನಿವಾರಣೆಗೆ ಉತ್ತಮವಾದ ನೈಸರ್ಗಿಕ ಪರ್ಯಾಯವಾಗಿದೆ. ದಿನಕ್ಕೆ ಎರಡು ಬಾರಿ ಶುಂಠಿ ಚಹಾ ಕುಡಿಯುವುದರಿಂದ ತೀವ್ರತೆಯನ್ನು ಕಡಿಮೆ ಮಾಡಬಹುದು.

Ginger Tea: ಶುಂಠಿ ಚಹಾದ ವೈದ್ಯಕೀಯ ಗುಣಲಕ್ಷಣಗಳ ಬಗ್ಗೆ ಗೊತ್ತಾ… | Udayavani  – Latest Kannada News, Udayavani Newspaper

ಸಾಕಷ್ಟು ನೀರು ಕುಡಿಯುವುದು: ದೇಹದಲ್ಲಿ ನೀರಿನ ಕೊರತೆಯು ಕೂಡ ಮೈಗ್ರೇನ್‌ಗೆ ಕಾರಣವಾಗಬಹುದು. ದಿನವಿಡೀ ಕನಿಷ್ಠ 4-5 ಲೀಟರ್ ನೀರು ಕುಡಿಯುವುದರಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಬಹುದು.

Young indian woman drink mineral water from glass at morning Drinking water. Side view young indian woman enjoy pure fresh cool mineral water at morning. Profile shot of thirsty millennial mixed race lady hold glass swallow crystal still aqua with closed eyes drinking water stock pictures, royalty-free photos & images

ದಾಲ್ಚಿನ್ನಿ ಪೇಸ್ಟ್: ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಕಲಸಿ ದಪ್ಪ ಪೇಸ್ಟ್ ತಯಾರಿಸಿ, ಅದನ್ನು ಹಣೆಗೆ ಹಚ್ಚುವುದರಿಂದ ಅರ್ಧ ಗಂಟೆಯಲ್ಲಿ ನೋವು ಇಳಿಯುತ್ತದೆ ಎಂಬ ಅಭಿಪ್ರಾಯವಿದೆ.

Many sticks of cinnamon See other raw fruit and vegetable images: cinnamon stock pictures, royalty-free photos & images

ತಣ್ಣನೆಯ ಪಟ್ಟಿಯನ್ನು ಇಡುವುದು: ಹಣೆಗೆ ಐಸ್ ಪ್ಯಾಕ್ ಅಥವಾ ತಣ್ಣನೆಯ ಬಟ್ಟೆ ಇಡುವುದರಿಂದ ತಲೆ ನರಗಳು ತಂಪಾಗುತ್ತವೆ ಮತ್ತು ತಾತ್ಕಾಲಿಕ ಪರಿಹಾರ ಸಿಗುತ್ತದೆ.

ಮೈಗ್ರೇನ್ ಪ್ರತಿ ವ್ಯಕ್ತಿಯಲ್ಲಿ ವಿಭಿನ್ನವಾಗಿರಬಹುದು. ಆದ್ದರಿಂದ ಈ ಹಳೆ ಕಾಲದ ಮನೆಮದ್ದುಗಳು ಪರಿಣಾಮಕಾರಿಯಾಗಿವೆ ತೀವ್ರ ಸಮಸ್ಯೆ ಇದ್ದರೆ ತಜ್ಞರ ಸಲಹೆ ಅತ್ಯವಶ್ಯಕ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!