Home Remedies | ಬಿಲ್ವಪತ್ರೆ ಎಲೆ ನಮ್ಮ ಆರೋಗ್ಯಕ್ಕೆ ವರ ಅನ್ನೋದು ಗೊತ್ತಿದ್ಯಾ?

ಬಿಲ್ವಪತ್ರೆ ಎಂಬ ಹೆಸರನ್ನು ಕೇಳಿದಾಗ ಹೆಚ್ಚಿನವರಿಗೆ ನೆನಪಾಗುವುದು ಶಿವನ ಆರಾಧನೆ. ಮಹಾಶಿವರಾತ್ರಿ ದಿನದಲ್ಲಿ ಅಥವಾ ಪ್ರತಿಯೊಂದು ಸೋಮವಾರ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ಪವಿತ್ರ ಕಾರ್ಯವೆಂದು ಭಾವಿಸಲಾಗುತ್ತದೆ. ಆದರೆ ಈ ಎಲೆ ಕೇವಲ ಧಾರ್ಮಿಕ ಆಚರಣೆಗಾಗಿ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ಮಹತ್ತರವಾದ ಹಿತವನ್ನು ನೀಡುತ್ತದೆ ಎಂಬುದನ್ನು ಅನೇಕರು ಗಮನಿಸಿಲ್ಲ. ಬಿಲ್ವಪತ್ರೆಯಲ್ಲಿ ಸಹಜವಾಗಿ ದೊರೆಯುವ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ1, ವಿಟಮಿನ್ ಬಿ6, ಕ್ಯಾಲ್ಸಿಯಂ ಹಾಗೂ ನಾರಿನಂತಹ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಸಹಕಾರಿ. ಆಯುರ್ವೇದದಲ್ಲಿಯೂ ಬಿಲ್ವಪತ್ರೆಯನ್ನು ಔಷಧೀಯ ಎಲೆ ಎಂದು ಪರಿಗಣಿಸಿ ಹಲವಾರು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಹೊಟ್ಟೆಯ ಆರೋಗ್ಯಕ್ಕೆ ಸಹಕಾರಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಬಿಲ್ವಪತ್ರೆ ಸೇವನೆ ಮಾಡುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸಿ ಹೊಟ್ಟೆ ಹಗುರವಾಗುತ್ತದೆ.

ಹೃದಯದ ಆರೋಗ್ಯಕ್ಕೆ ಲಾಭ
ಬಿಲ್ವಪತ್ರೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ಹೃದಯದ ಮಾಂಸಖಂಡಗಳನ್ನು ಬಲಗೊಳಿಸುತ್ತವೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಇದು ಸಹಕಾರಿ. ಲಿವರ್ ಆರೋಗ್ಯಕ್ಕೂ ಬಿಲ್ವಪತ್ರೆ ಉತ್ತಮ ಪ್ರಭಾವ ಬೀರುತ್ತದೆ.

ಮಧುಮೇಹಿಗಳಿಗೆ ಸಹಕಾರಿ
ನಾರು ಹಾಗೂ ಪೌಷ್ಟಿಕಾಂಶಗಳು ಹೆಚ್ಚಿರುವುದರಿಂದ ಬಿಲ್ವಪತ್ರೆ ಮಧುಮೇಹಿಗಳಿಗೆ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇರಿಸಲು ಸಹಕಾರಿಯಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಸೇವನೆ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಣ್ಣಪುಟ್ಟ ಜ್ವರ, ಶೀತ, ಚರ್ಮ ಸಂಬಂಧಿ ತೊಂದರೆಗಳು ಸುಲಭವಾಗಿ ತಟ್ಟುವುದಿಲ್ಲ.

ಸೇವನೆ ಮಾಡುವ ವಿಧಾನ
ಬಿಲ್ವಪತ್ರೆಯನ್ನು ಸ್ವಚ್ಛವಾಗಿ ತೊಳೆದು ಹಸಿಯಾಗಿ ಸೇವಿಸಬಹುದು. ಜೇನುತುಪ್ಪದೊಂದಿಗೆ ತಿನ್ನಬಹುದು ಅಥವಾ ಡಿಕಾಕ್ಷನ್ ತಯಾರಿಸಿ ಕುಡಿಯಬಹುದು.

ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ನಮ್ಮ ಜೀವನಕ್ಕೂ ಒಂದು ಆರೋಗ್ಯದ ವರವಾಗಬಹುದು. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಇದರ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಹೊಟ್ಟೆ ಆರೋಗ್ಯದಿಂದ ಹಿಡಿದು ಹೃದಯದ ಆರೋಗ್ಯದವರೆಗೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹೀಗಾಗಿ, ಧಾರ್ಮಿಕ ಮಹತ್ವವಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಲ್ಲಿಯೂ ಬಿಲ್ವಪತ್ರೆ ಅನಿವಾರ್ಯವಾದದ್ದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!