ಇತ್ತೀಚಿನ ದಿನಗಳಲ್ಲಿ ಕೆಮ್ಮಿನ ಸಿರಪ್‌ಗಳ ಅತಿಯಾದ ಬಳಕೆ ಮಕ್ಕಳ ಹಾಗೂ ದೊಡ್ಡವರ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತಿದೆ. ಸಾಮಾನ್ಯವಾಗಿ ಮಕ್ಕಳು ಕಹಿ ಔಷಧ ಸೇವಿಸಲು ತೊಂದರೆಪಡುವುದರಿಂದ ಸಿರಪ್‌ಗಳಲ್ಲಿ ರುಚಿ ಹೆಚ್ಚಿಸುವ ಅಂಶಗಳನ್ನು ಸೇರಿಸಲಾಗುತ್ತದೆ. ಆದರೆ ಇವುಗಳ ಅಡ್ಡ ಪರಿಣಾಮಗಳು ಅತ್ಯಂತ ಗಂಭೀರವಾಗಬಹುದು.
ಆರೋಗ್ಯ ತಜ್ಞರ ಅಭಿಪ್ರಾಯದಲ್ಲಿ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವ ರೀತಿಯ ಕೆಮ್ಮಿನ ಔಷಧಿಗಳನ್ನೂ ನೀಡಬಾರದು. ಔಷಧ ಬದಲು, ಮನೆಮದ್ದುಗಳು ಹೆಚ್ಚು ಸುರಕ್ಷಿತ.
ನಿಂಬೆ ಪಾನಕ: 6 ತಿಂಗಳಿನಿಂದ 1 ವರ್ಷದವರೆಗೆ ಇರುವ ಮಕ್ಕಳಿಗೆ ದಿನಕ್ಕೆ 1–2 ಚಮಚ ಉಗುರುಬೆಚ್ಚಗಿನ ನಿಂಬೆ ಪಾನಕ ನೀಡಬಹುದು.
ಜೇನುತುಪ್ಪ ಹಾಗೂ ಶುಂಠಿ: ಸ್ವಲ್ಪ ದೊಡ್ಡ ಮಕ್ಕಳಿಗೆ ಹಾಗೂ ಹಿರಿಯರಿಗೆ ಶುಂಠಿ ತುರಿದು ಜೇನುತುಪ್ಪದೊಂದಿಗೆ ಸೇವಿಸಿದರೆ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ.
ಉಪ್ಪು ನೀರಿನಿಂದ ಗಾರ್ಗಲ್: ಉಗುರುಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಗಾರ್ಗಲ್ ಮಾಡಿದರೆ ಕೆಮ್ಮಿನ ತೊಂದರೆ ಕಡಿಮೆಯಾಗುತ್ತದೆ.
ಹೆಚ್ಚು ನೀರು ಕುಡಿಯುವುದು: ದೇಹದ ತೇವಾಂಶ ಉಳಿದರೆ ಗಂಟಲಿನ ಒಣತನ ಕಡಿಮೆಯಾಗುತ್ತದೆ.
ಆಹಾರ ನಿಯಂತ್ರಣ: ಆಸಿಡ್ ರಿಫ್ಲಕ್ಸ್ ತಪ್ಪಿಸಲು ಖಾಲಿ ಹೊಟ್ಟೆಯಲ್ಲಿ ಇರಬಾರದು ಮತ್ತು ತಿಂದ ತಕ್ಷಣ ಮಲಗಬಾರದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)