ಚಳಿಗಾಲದಲ್ಲಿ ಶೀತ ಕೆಮ್ಮು ಸರ್ವೇ ಸಾಮಾನ್ಯ ಹಾಗಂತ ಪದೇ ಪದೇ ಮಾತ್ರೆ ಕುಡಿಯೋಕಾಗುತ್ತ. ಹಾಗೆ ಮಾಡಿದ್ರೆ ನಮ್ಮ ಆರೋಗ್ಯ ಏನಾಗ್ಬೇಡ ಹೇಳಿ. ಅದಿಕ್ಕೆ ಮನೆಯಲ್ಲೇ ಸಿಗುವ ಈ ದೊಡ್ಡಪತ್ರೆಯ ಎಲೆ ನಿಮ್ಮ ಈ ಶೀತ ಕೆಮ್ಮಿಗೆ ರಾಮಬಾಣ. ಹಳೆಯ ಕಾಲದಿಂದಲೂ ಆಯುರ್ವೇದ ಮತ್ತು ಮನೆಮದ್ದುಗಳಲ್ಲಿ ಬಳಕೆಯಾಗುತ್ತಿರುವ ದೊಡ್ಡಪತ್ರೆ ಎಲೆಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ನೀಡುತ್ತವೆ.
- ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಗೆ ಪರಿಹಾರ: ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ಶೀತ, ಕೆಮ್ಮು, ಆಸ್ತಮಾ ಹಾಗೂ ಕಟ್ಟಿದ ಮೂಗು ಸಮಸ್ಯೆಗಳಲ್ಲಿ ಆರಾಮ ಸಿಗುತ್ತದೆ. ಎಲೆಗಳ ವಾಸನೆ ಉಸಿರಾಡಿದರೂ ಮೂಗು ಸಡಿಲವಾಗುತ್ತದೆ.
- ಜೀರ್ಣಕ್ರಿಯೆ ಸುಧಾರಣೆ: ದೊಡ್ಡಪತ್ರೆ ಎಲೆಗಳನ್ನು ಅಗಿಯುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೀರ್ಣಾಂಗ ವ್ಯವಸ್ಥೆ ಸುಗಮವಾಗಿ ಕೆಲಸ ಮಾಡುತ್ತದೆ.
- ನೋವು ಮತ್ತು ಉರಿಯೂತ ನಿವಾರಣೆ: ಇದು ನೈಸರ್ಗಿಕ ನೋವು ನಿವಾರಕ. ಹಲ್ಲುನೋವು, ತಲೆನೋವು, ಕೀಲು ನೋವು ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಎಲೆಗಳ ಪೇಸ್ಟ್ ಅನ್ನು ನೋವಿರುವ ಸ್ಥಳಕ್ಕೆ ಹಚ್ಚಿದರೆ ಉಪಶಮನ ಸಿಗುತ್ತದೆ.
- ಮೂಳೆ ಆರೋಗ್ಯಕ್ಕೆ ಸಹಕಾರಿ: ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ದೊಡ್ಡಪತ್ರೆ ಸಹಾಯ ಮಾಡುತ್ತದೆ. ದೇಹದಲ್ಲಿನ ಒಳ ಹಾಗೂ ಹೊರ ಉರಿಯೂತವನ್ನು ತಗ್ಗಿಸುತ್ತದೆ.
- ಹೊಟ್ಟೆನೋವಿಗೆ ತಕ್ಷಣದ ಮನೆಮದ್ದು: ದೊಡ್ಡಪತ್ರೆ ಎಲೆಗೆ ಸ್ವಲ್ಪ ಇಂಗು ಮತ್ತು ಕಪ್ಪು ಉಪ್ಪು ಬೆರೆಸಿ ಸೇವಿಸಿ, ಬೆಚ್ಚಗಿನ ನೀರು ಕುಡಿದರೆ ಹೊಟ್ಟೆನೋವಿಗೆ ತಕ್ಷಣ ಆರಾಮ ಸಿಗುತ್ತದೆ.

