Home Remedies | ಎಷ್ಟೇ ಮಾತ್ರೆ ಕುಡಿದರು ಕೂಡ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ವಾ? ಈ ಮನೆಮದ್ದು ಟ್ರೈ ಮಾಡಿ!

ಮಧುಮೇಹವು ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಅಪಾಯಕಾರಿ ಕಾಯಿಲೆ. ಇದು ನಿಧಾನವಾಗಿ ದೇಹದ ವಿವಿಧ ಅಂಗಾಂಗಗಳನ್ನು ದುರ್ಬಲಗೊಳಿಸುತ್ತದೆ. ನಿಯಂತ್ರಣವಿಲ್ಲದೆ ಮುಂದುವರಿದರೆ, ಮೂತ್ರಪಿಂಡ ಸೇರಿದಂತೆ ಅನೇಕ ಅಂಗಾಂಗಗಳು ಹಾನಿಗೊಳಗಾಗುವ ಅಪಾಯವಿದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹದ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳಲ್ಲಿಯೂ ಕಾಣಿಸುತ್ತಿದೆ. ಆದ್ದರಿಂದ ಸಕಾಲದಲ್ಲಿ ಕ್ರಮ ಕೈಗೊಳ್ಳುವುದು ಅತ್ಯಗತ್ಯ.

ವೈದ್ಯರ ಪ್ರಕಾರ, ಜೀವನಶೈಲಿ ಬದಲಾವಣೆಗಳು ಮಧುಮೇಹ ನಿಯಂತ್ರಣಕ್ಕೆ ಮುಖ್ಯ. ಸಿಹಿ, ಜಂಕ್ ಹಾಗೂ ಸಂಸ್ಕರಿಸಿದ ಆಹಾರದಿಂದ ದೂರವಿದ್ದು, ವ್ಯಾಯಾಮ ಹಾಗೂ ಫೈಬರ್‌ಯುಕ್ತ ಆಹಾರ ಸೇವನೆ ಮುಖ್ಯ. ಜೊತೆಗೆ ಕೆಲವು ಮನೆಮದ್ದುಗಳು ಸಹ ಸಹಾಯಕವಾಗುತ್ತವೆ.

ಮೆಂತ್ಯ ಬೀಜಗಳು: ರಾತ್ರಿ ನೀರಿನಲ್ಲಿ ನೆನೆಸಿದ ಬೀಜಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.

ಹಾಗಲಕಾಯಿ: ಖಾಲಿ ಹೊಟ್ಟೆಯಲ್ಲಿ ರಸ ಕುಡಿಯುವುದರಿಂದ ಅಥವಾ ತರಕಾರಿಯಾಗಿ ಸೇವಿಸುವುದರಿಂದ ರಕ್ತಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.

ಬೇವು: ಬೇವು ಎಲೆಗಳ ರಸವು ರೋಗನಿರೋಧಕ ಶಕ್ತಿ ಹೆಚ್ಚಿಸಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

ನೇರಳೆ ಹಣ್ಣು: ಹಣ್ಣು ಹಾಗೂ ಬೀಜ ಪುಡಿ ಎರಡೂ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ.

ನೆಲ್ಲಿಕಾಯಿ: ವಿಟಮಿನ್ C ಸಮೃದ್ಧವಾಗಿದ್ದು, ಹಸಿ ಅಥವಾ ರಸ ರೂಪದಲ್ಲಿ ಸೇವನೆ ಪ್ರಯೋಜನಕಾರಿ.

ದಾಲ್ಚಿನ್ನಿ: ಪುಡಿ ಅಥವಾ ಕಷಾಯ ರೂಪದಲ್ಲಿ ಸೇವನೆಯಿಂದ ದೇಹದಲ್ಲಿ ಸಕ್ಕರೆಯ ನಿಯಂತ್ರಣ ಸಾಧ್ಯ.

ಬೇಲದ ಎಲೆಗಳು: ಕಷಾಯ ರೂಪದಲ್ಲಿ ಸೇವಿಸಿದರೆ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.

ಮಧುಮೇಹವು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ ತಂದೊಡ್ಡುವ ಗಂಭೀರ ಕಾಯಿಲೆ. ಸಮತೋಲನಯುತ ಆಹಾರ, ನಿತ್ಯ ವ್ಯಾಯಾಮ ಹಾಗೂ ಮನೆಮದ್ದುಗಳ ಸಹಾಯದಿಂದ ರಕ್ತಸಕ್ಕರೆ ನಿಯಂತ್ರಣ ಸಾಧ್ಯ. ಆದರೆ ಯಾವುದೇ ಪರಿಹಾರ ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!