ಚಳಿಗಾಲ, ಧೂಳು, ಶೀತ–ಜ್ವರ ಅಥವಾ ಧ್ವನಿ ಹೆಚ್ಚು ಬಳಸುವ ಅಭ್ಯಾಸ… ಯಾವುದರಿಂದಲಾದರೂ ಗಂಟಲು ನೋವು ಕಾಣಿಸಿಕೊಳ್ಳಬಹುದು. ಮಾತನಾಡಲು ಕಷ್ಟ, ಆಹಾರ ನುಂಗುವಾಗ ನೋವು, ಗಂಟಲಿನಲ್ಲಿ ಕೆರೆತ, ಅಥವಾ ಕಿರಿಕಿರಿ ಇವು ಸಾಮಾನ್ಯ ಲಕ್ಷಣಗಳು. ಔಷಧಿ ಬಳಸುವುದಕ್ಕಿಂತ ಮೊದಲು ಮನೆಯಲ್ಲಿ ಲಭ್ಯವಿರುವ ಕೆಲವು ಮನೆಮದ್ದುಗಳು ಗಂಟಲು ನೋವನ್ನು ಬೇಗ ನಿವಾರಿಸುತ್ತದೆ.
- ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಿ (Salt Water Gargle): ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಟೀಸ್ಪೂನ್ ಉಪ್ಪು ಹಾಕಿ ದಿನಕ್ಕೆ 2–3 ಬಾರಿ Gargle ಮಾಡಿದರೆ ಉರಿಯೂತ ಕಡಿಮೆಯಾಗುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
- ತುಪ್ಪ–ಮೆಣಸಿನ ಹಾಲು: ಬಿಸಿ ಹಾಲಿಗೆ ತುಪ್ಪ ಮತ್ತು ಸ್ವಲ್ಪ ಮೇಣಸು ಪುಡಿ ಹಾಕಿ ಕುಡಿಯುವುದರಿಂದ ಗಂಟಲಿಗೆ ಮಸಾಜ್ ನೀಡಿದಂತೆ ಆಗಿ ನೋವು, ಬಿಸಿ ಹಾಗೂ ಕಫ ಕಡಿಮೆಯಾಗುತ್ತದೆ.
- ಜೇನು–ಶುಂಠಿ ಮಿಶ್ರಣ: ಜೇನು ಒಂದು ಚಮಚಕ್ಕೆ ತಾಜಾ ಶುಂಠಿ ರಸ ಕೆಲವು ಹನಿಗಳು ಸೇರಿಸಿ ಸೇವಿಸಿದರೆ ಬ್ಯಾಕ್ಟೀರಿಯ ನಿವಾರಣೆಗೂ ಉತ್ತಮ, ಹಾಗೂ ಗಂಟಲು ತೇವದಲ್ಲಿರಲು ಸಹಾಯಕ.
- ಸೋಪು–ಜೀರಿಗೆ ಕಷಾಯ: ಸೋಪು, ಜೀರಿಗೆ, ತುಳಸಿ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ಗಂಟಲಿನ ಉರಿ ಮತ್ತು ನೋವು ಕಡಿಮೆಯಾಗುತ್ತದೆ.
- ಬಿಸಿ ನೀರಿನ ಆವಿ: ಬಿಸಿ ನೀರಿನ ಆವಿ ತೆಗೆದುಕೊಳ್ಳುವುದರಿಂದ ಗಂಟಲು ಮತ್ತು ಮೂಗಿನ ದಾರಿಗಳು ತೆರೆಯುತ್ತವೆ, ನೋವು ಕಡಿಮೆಯಾಗುತ್ತದೆ.
ಈ ಮನೆಮದ್ದುಗಳು ಗಂಟಲು ನೋವಿಗೆ ವೇಗವಾಗಿ ಶಮನ ನೀಡುವ ಸರಳ ಮತ್ತು ನೈಸರ್ಗಿಕ ವಿಧಾನಗಳು. ಲಕ್ಷಣಗಳು 3–4 ದಿನಗಳಿಗಿಂತ ಹೆಚ್ಚು ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

