ಪ್ರಯಾಣದ ವೇಳೆ ವಾಂತಿಯಾಗುತ್ತಾ? ಹಾಗಿದ್ರೆ ಇಲ್ಲಿವೆ ಸರಳ ಮನೆಮದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾಮಾನ್ಯವಾಗಿ ಬಸ್ಸಿನಲ್ಲಿ ಅಥವಾ ಕಾರಿನಲ್ಲಿ ಪ್ರಯಾಣಿಸುವ ವೇಳೆ ಹೆಚ್ಚಿನ ಜನರಿಗೆ ವಾಂತಿ ಬರುವುದು ಸಹಜ. ಆದರೆ ಕೆಲವರಿಗೆ ವಿಮಾನದಲ್ಲೂ ಇದೇ ಅನುಭವವಾಗುತ್ತದೆ. ಈ ಕಾರಣದಿಂದ ಎಷ್ಟೋ ಜನರು ಪ್ರಯಾಣ ಮಾಡುವ ಆಸೆಯಿದ್ದರೂ ವಾಕರಿಕೆ, ವಾಂತಿಯಾಗುವಿಕೆ, ಆಯಾಸದ ಕಾರಣ ಎಲ್ಲಿಯೂ ಹೋಗಲು ಇಷ್ಟ ಪಡುವುದಿಲ್ಲ. ಇನ್ನೂ ಕೆಲವರು ವಾಂತಿಯಾಗದಿರಲು ಮಾತ್ರೆ ತೆಗೆದುಕೊಳ್ಳದೆ ಪ್ರಯಾಣ ಬೆಳೆಸುವುದೇ ಇಲ್ಲ. ಅಂತಹವರು ವಾಂತಿ ತಡೆಗಟ್ಟುವ ಸುಲಭ ಮನೆ ಮದ್ದುಗಳು ಇಲ್ಲಿವೆ.

ಪ್ರಯಾಣಿಸುವಾಗ ವಾಂತಿಯಾಗುವುದನ್ನು ತಡೆಗಟ್ಟಲು ಮನೆಮದ್ದು:

ತಾಜಾ ಗಾಳಿ
ವಾಂತಿ ಆಗುವ ಭೀತಿವುಳ್ಳವರು ಯಾವಾಗಲೂ ತಮ್ಮ ಪ್ರಯಾಣದ ವೇಳೆ ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಂಡು ತಾಜಾ ಗಾಳಿಯನ್ನು ಪಡೆಯಿರಿ. ಈ ಮೂಲಕ ವಾಂತಿಯಾಗುವಿಕೆಯನ್ನು ತಡೆಗಟ್ಟಬಹುದು.

ನಿಂಬೆಯ ವಾಸನೆ
ಪ್ರಯಾಣದ ವೇಳೆ ಕಿತ್ತಳೆ ಹಣ್ಣು ಅಥವಾ ನಿಂಬೆಹಣ್ಣನ್ನು ಜೊತೆಗೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಆಗಾಗ ನಿಂಬೆ ಹಣ್ಣನ್ನು ಆಘ್ರಾಣಿಸುವುದರಿಂದ ವಾಂತಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ.

ರುಚಿ ಲಿಂಬೆ
ರುಚಿ ಲಿಂಬೆಯಂತಹ ಪದಾರ್ಥಗಳನ್ನು ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವುದು ಉತ್ತಮ. ರುಚಿಲಿಂಬೆ ಎಂದರೆ ಉಪ್ಪು ಹಾಕಿ ಒಣಗಿಸಿದ ಲಿಂಬೆಯ ತುಂಡು. ಪ್ರಯಾಣದ ವೇಳೆ ಒಂದು ತುಂಡನ್ನು ಬಾಯಿಗೆ ಹಾಕಿಕೊಂಡು ಜಗಿದರೆ ವಾಂತಿ ನಿಲ್ಲುತ್ತದೆ.

ನಿಂಬೆ ಪುಡಿ
ನಿಂಬೆ ಪುಡಿಯ ರಸ ಕುಡಿಯುವದರಿಂದ ವಾಂತಿಯನ್ನು ತಡೆಗಟ್ಟಬಹುದು. ಇದಕ್ಕೆ ಮೊದಲಿಗೆ ನಿಂಬೆ ಹಣ್ಣಿನ ತುಂಡೊಂದನ್ನು ಕಡಿಮೆ ಉರಿಯಲ್ಲಿ ಒಲೆಯಲ್ಲಿ ಸುಟ್ಟು ನಂತರ ಬಿಸಿಲಿನಲ್ಲಿ ಒಣಗಿಸಿಡಬೇಕು. ನಂತರ ಒಣಗಿದ ಲಿಂಬೆ ತುಂಡುಗಳನ್ನು ಪುಡಿಮಾಡಿಟ್ಟುಕೊಳ್ಳಬೇಕು. ವಾಂತಿ ಬರುವಂತೆ ಭಾಸವಾದ ಕೂಡಲೇ ಈ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ವಾಂತಿಯಾಗುವುದನ್ನು ನಿಯಂತ್ರಿಸಬಹುದು.

ಒಣ ಶುಂಠಿ
ಚಿಕ್ಕ ತುಂಡು ಶುಂಠಿಯನ್ನು ವಾಂತಿ ಬರುವ ಮುನ್ನ ಬಾಯಿಗೆ ಹಾಕಿಕೊಂಡರೆ ವಾಂತಿಯಾಗುವ ಪ್ರಮಾಣ ಕಡಿಮೆ. ಜತೆಗೆ ಉಪ್ಪು ಹಾಕಿ ಒಣಗಿಸಿದ ಶುಂಠಿಯ ತುಂಡುಗಳನ್ನು ತಿನ್ನಿ.

ಏಲಕ್ಕಿ
ಪ್ರಯಾಣದ ವೇಳೆ ಬಾಯಿಯಲ್ಲಿ ಏಲಕ್ಕಿ ಚೂರನ್ನು ಹಾಕಿಕೊಂಡು ಬಹುಕಾಲ ಬಾಯಿಯಲ್ಲೇ ಇಟ್ಟುಕೊಂಡರೂ ವಾಂತಿಯಾಗುವುದನ್ನು ತಡೆಯಬಹುದು.

ಬಹುತೇಕರಿಗೆ ಪ್ರಯಾಣದ ವೇಳೆ ವಾಂತಿಯಾಗುವ ಅನುಭವವಾಗುತ್ತದೆ. ಆದರೆ ವಾಂತಿಯಾಗುವುದಿಲ್ಲ. ಅಂತಹವರು ತಮ್ಮ ಗಮನವನ್ನು ಬೇರೆಡೆ ಸೆಳೆಯಲು ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು ಅಥವಾ ಸಹ ಪ್ರಯಾಣಿಕರ ಜತೆ ಮಾತನಾಡುವುದನ್ನು ಮಾಡಿದರೆ ವಾಂತಿಯಾಗುವ ಅನುಭವದಿಂದ ಹೊರಬರಬಹುದು. ಇನ್ನೂ ಬಸ್ಸು, ಕಾರು, ವಿಮಾನದಲ್ಲಿ ಹೋಗುವಾಗ ವಾಂತಿ ಮಾಡುವವರು ಪ್ರಯಾಣಕ್ಕೂ ಮುನ್ನ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು. ಆಲ್ಕೋಹಾಲ್​ ಸೇವೆನೆ ಮಾಡಲೇಬಾರದು ಎಂಬುದನ್ನು ನೆನಪಿನಲ್ಲಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!