ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟು (Dandruff) ಸಮಸ್ಯೆ ಸಾಮಾನ್ಯವಾಗಿಹೋಗಿದೆ. ವಾತಾವರಣದಲ್ಲಿ ಇರುವ ನೀರಿನ ಅಂಶ ಹಾಗೂ ತಂಪು ಗಾಳಿಯಿಂದ ಕೂದಲು ಶುಷ್ಕವಾಗಿ ದುರ್ಬಲಗೊಳ್ಳುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ, ತಲೆಹೊಟ್ಟು ಮಾತ್ರವಲ್ಲ ಕೂದಲು ಉದುರುವಿಕೆಯೂ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಶ್ಯಾಂಪೂ ಮತ್ತು ಎಣ್ಣೆಗಳನ್ನು ಬಳಸಿದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಆದರೆ, ಮನೆಯಲ್ಲೇ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ತಲೆಹೊಟ್ಟನ್ನು ಕಡಿಮೆ ಮಾಡಬಹುದು.
ನಿಂಬೆ ರಸವು ತಲೆಹೊಟ್ಟಿಗೆ ಉತ್ತಮ ಪರಿಹಾರ. ನಿಂಬೆರಸವನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಗೆ ಮಸಾಜ್ ಮಾಡಿದರೆ ಒಣಗುವಿಕೆ ಕಡಿಮೆಯಾಗುತ್ತದೆ. ಅದೇ ರೀತಿ, ಟೀ ಟ್ರೀ ಆಯಿಲ್ (Tea Tree Oil) ಶ್ಯಾಂಪೂಗೆ ಸೇರಿಸಿ ತಲೆ ತೊಳೆದರೆ ಕೆಲವು ವಾರಗಳಲ್ಲೇ ಉತ್ತಮ ಫಲಿತಾಂಶ ಕಾಣಬಹುದು.
ಅಲೋವೆರಾ ಜೆಲ್ ಕೂಡ ತಲೆಹೊಟ್ಟಿಗೆ ಪರಿಣಾಮಕಾರಿ ಮನೆಮದ್ದು. ಇದರಲ್ಲಿರುವ ಆಂಟಿಫಂಗಲ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ತಲೆಹೊಟ್ಟನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ನಿಯಮಿತವಾಗಿ ಅಲೋವೆರಾ ಜೆಲ್ ತಲೆಗೆ ಹಚ್ಚುವುದು ಕೂದಲಿಗೆ ಹೊಳಪು ನೀಡುತ್ತದೆ.
ಮೊಸರು ಕೂಡ ಪ್ರೋಟೀನ್ ಸಮೃದ್ಧವಾಗಿದ್ದು, ತಲೆಹೊಟ್ಟಿನಿಂದ ರಕ್ಷಣೆ ನೀಡುತ್ತದೆ. ಮೊಸರನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯುವುದರಿಂದ ತಲೆಹೊಟ್ಟಿನ ತೊಂದರೆ ಕಡಿಮೆಯಾಗುತ್ತದೆ. ಜೊತೆಗೆ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ನಿಂಬೆ ರಸದ ಪೇಸ್ಟ್ ಬಳಸಿದರೆ ತಲೆ ಶುದ್ಧವಾಗುತ್ತದೆ.
ಮೆಂತ್ಯ ಬೀಜಗಳ ಪೇಸ್ಟ್ ಕೂಡ ತಲೆಹೊಟ್ಟಿಗೆ ಮನೆಮದ್ದು. ನೆನೆಸಿದ ಮೆಂತ್ಯಕ್ಕೆ ನಿಂಬೆರಸ ಸೇರಿಸಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಮಾತ್ರವಲ್ಲ ಕೂದಲು ಬಲವಾಗುತ್ತದೆ.
ತಲೆಹೊಟ್ಟು ಸಮಸ್ಯೆ ಸಾಮಾನ್ಯವಾದರೂ, ನೈಸರ್ಗಿಕ ಮನೆಮದ್ದುಗಳಿಂದ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ನಿಯಮಿತ ಆರೈಕೆಯ ಮೂಲಕ ಕೂದಲನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಸಾಧ್ಯ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)