ದೇಹದ ಕೆಲವು ಭಾಗದಲ್ಲಿರೋ ಅನಗತ್ಯ ಕೂದಲುಗಳನ್ನು (wanted hair ) ತೆಗೆದು ಹಾಕೋಕೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಲಭ್ಯವಿರುವಾಗಲು, ನೈಸರ್ಗಿಕ ವಿಧಾನಗಳತ್ತ ಜನರು ತಿರುಗಿಕೊಳ್ಳುತ್ತಿರುವುದು ಗಮನಾರ್ಹ. ಇದಕ್ಕೆ ಕಾರಣ, ಕೆಮಿಕಲ್ ಅಂಶಗಳಿರುವ ಕ್ರಿಮ್‌ಗಳು ಅಥವಾ ವ್ಯಾಕ್ಸ್ ವಿಧಾನಗಳಿಂದ ಚರ್ಮಕ್ಕೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ದೊರೆಯುವ ಸಾಮಗ್ರಿಗಳ ಬಳಕೆಯಿಂದ ಶರೀರದ ಅನಗತ್ಯ ಕೂದಲು ತೆಗೆದುಹಾಕುಬಹುದು.
ಕಡಲೆ ಹಿಟ್ಟು ಮತ್ತು ಹಾಲಿನ ಮಿಶ್ರಣ: ಒಂದು ಚಮಚ ಕಡಲೆ ಹಿಟ್ಟುನ್ನು ಸ್ವಲ್ಪ ಹಾಲು ಮತ್ತು ಅರಿಶಿಣ ಪುಡಿ ಜೊತೆ (turmeric powder) ಬೆರೆಸಿ ಪೇಸ್ಟ್ ಮಾಡಬೇಕು. ಈ ಮಿಶ್ರಣವನ್ನು ಮುಖ ಅಥವಾ ಇಚ್ಛಿತ ಅಂಗಗಳಲ್ಲಿ ಹಚ್ಚಿ, ಒಣಗಿದ ಬಳಿಕ ಮೃದುವಾಗಿ ರಬ್ಬಿಂಗ್ ಮಾಡಿ ತೆಗೆದುಹಾಕಬೇಕು. ವಾರಕ್ಕೆ 2-3 ಬಾರಿ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಪರಿಣಾಮ ಕಾಣಬಹುದು.
ಸಕ್ಕರೆ, ಲಿಂಬೆ ಹಾಗೂ ಜೇನುತುಪ್ಪ: ಸಕ್ಕರೆ ಮತ್ತು ಲಿಂಬೆ ರಸವನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಬೇಡದ ಕೂದಲಿರುವ ಭಾಗದಲ್ಲಿ ಹಚ್ಚಿ, ಕೆಲವು ಸಮಯದ ನಂತರ ಮೃದುವಾಗಿ ಒರೆಸಿ.
ಇಂತಹ ನೈಸರ್ಗಿಕ ವಿಧಾನಗಳು ಕೂದಲು ಬೆಳವಣಿಗೆಗೆ ತಾತ್ಕಾಲಿಕ ತಡೆ ನೀಡುತ್ತವೆ ಹಾಗೂ ಚರ್ಮಕ್ಕೂ ತೊಂದರೆ ನೀಡುವುದಿಲ್ಲ. ಆದರೆ ಯಾವ ವಿಧಾನವನ್ನೇ ಬಳಸಿದರೂ ನಿರಂತರವಾಗಿ ಮತ್ತು ಸಮರ್ಪಕವಾಗಿ ಅನುಸರಿಸಿದಾಗ ಮಾತ್ರ ಫಲಿತಾಂಶ ಲಭ್ಯವಾಗುವುದು. ಯಾವುದೇ ಅಲರ್ಜಿಯ ಲಕ್ಷಣ ಕಂಡುಬಂದರೆ ತಕ್ಷಣ ತಜ್ಞರ ಸಲಹೆ ಪಡೆಯುವುದು ಉತ್ತಮ.