March 12, 2026
Thursday, March 12, 2026
spot_img

ಡಿಸಿಎಂ ಭೇಟಿಗೂ ಮುನ್ನ ಭೂವರಾಹನಾಥ ದೇವಸ್ಥಾನದಲ್ಲಿ ಹೆಜ್ಜೇನು ದಾಳಿ: ಭಕ್ತರ ಪರದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪಾಹಾರ ಸಭೆ ಮುಗಿಸಿ, ‘ಟೆಂಪಲ್‌ ರನ್‌’ನ ಭಾಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಕೆ.ಆರ್‌.ಪೇಟೆ ತಾಲೂಕಿನ ವರಾಹನಾಥ ಕಲ್ಲಹಳ್ಳಿಯಲ್ಲಿರುವ ಪ್ರಸಿದ್ಧ ಭೂವರಾಹನಾಥ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಡಿಸಿಎಂ ಆಗಮಿಸುವುದಕ್ಕೂ ಮುನ್ನವೇ ದೇವಸ್ಥಾನದ ಆವರಣದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು, ಭಕ್ತರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು.

ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ವಿಶೇಷ ಪೂಜೆಗಳಲ್ಲಿ ಭಾಗಿಯಾಗಲು ಡಿಕೆಶಿ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಅವರ ಆಗಮನಕ್ಕೂ ಮುನ್ನವೇ ಮೃತ್ಯುಂಜಯ ಹೋಮಕ್ಕೆ ಭರ್ಜರಿ ಸಿದ್ಧತೆ ನಡೆದಿತ್ತು. ಸ್ಥಳೀಯ ಕಾಂಗ್ರೆಸ್‌ ಮುಖಂಡರು ಮತ್ತು ಅಪಾರ ಸಂಖ್ಯೆಯ ಭಕ್ತರು ಡಿಸಿಎಂ ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು.

ಆದರೆ, ಈ ಶುಭ ಸಂದರ್ಭಕ್ಕೂ ಮುನ್ನವೇ ದೇವಸ್ಥಾನದ ಆವರಣದಲ್ಲಿ ಹಠಾತ್ತನೆ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ದಿಕ್ಕಾಪಾಲಾದ ಭಕ್ತರು ಮತ್ತು ಸಿದ್ಧತೆಗಳಲ್ಲಿ ತೊಡಗಿದ್ದವರು ರಕ್ಷಣೆಗೆಂದು ಓಡಿದ್ದು, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹೆಜ್ಜೇನುಗಳ ಆತಂಕದ ನಡುವೆಯೂ, ನಿಗದಿಯಂತೆ ಡಿಕೆಶಿ ಅವರು ಭೂವರಾಹನಾಥ ದೇವಾಲಯಕ್ಕೆ ಹೊರಟಿದ್ದು, ವಿಶೇಷ ಪೂಜೆ ಮತ್ತು ಹೋಮದಲ್ಲಿ ಭಾಗಿಯಾಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !