ಹೊಸದಿಗಂತ ವರದಿ, ತುಮಕೂರು:
ಸಿಎಂ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ತುಮಕೂರಿನ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಷಡ್ಯಂತ್ರ ನಡೆಸಿದ್ದು, ಸ್ವಲ್ಪದರಲ್ಲೇ ಸಚಿವ ಪಾರಾಗಿರುವ ವಿಚಾರದ ಬಗ್ಗೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಮತ್ತೊಬ್ಬ ಪ್ರಭಾವಿ ನಾಯಕನ ಟೀಂನಿಂದ ಸತತವಾಗಿ ಹನಿಟ್ರ್ಯಾಪ್‌ಗೆ ಬೀಳಿಸಲು ಪ್ರಯತ್ನ ಮಾಡಲಾಗಿದೆ ಆದರೆ ಹನಿಟ್ರ್ಯಾಪ್ ಬಗ್ಗೆ ಅನುಮಾನ ಬಂದ ಸಚಿವ ಹನಿಟ್ರ್ಯಾಪ್ ಟೀಮ್‌ನ ಬಣ್ಣ ಬಯಲು ಮಾಡಿ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆಂದು ತಿಳಿದುಬಂದಿದೆ.
ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಗೆ ಬೀಳಿಸುವ ಮೂಲಕ ಅವರ ಚಾರಿತ್ರ್ಯ ವಧೆ ಮಾಡಿ ರಾಜಕೀಯವಾಗಿ ಮುಗಿಸುವ ತಂತ್ರವನ್ನು ಮತ್ತೊಬ್ಬ ಪ್ರಭಾವಿ ನಾಯಕ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಷಡ್ಯಂತ್ರ ಮಾಡಿದ್ದು ಯಾರು?
ಸಚಿವರಿಗೆ ಹನಿಟ್ರ್ಯಾಪ್ ಬಲೆ ಬೀಸಿದ ಷಡ್ಯಂತ್ರದ ಹಿಂದೆ ಮತ್ತೊಬ್ಬ ಪ್ರಭಾವಿ ನಾಯಕನ ಕೈವಾಡ ಇದೆ ಎನ್ನಲಾಗಿದೆ. ಸಚಿವರನ್ನು ಖೆಡ್ಡಾಗೆ ಕೆಡವಿ ರಾಜಕೀಯವಾಗಿ ಮುಗಿಸಿದರೆ ತಮಗೆ ಪದೇ ಪದೇ ಸವಾಲಾಗಿ ಎದುರು ನಿಲ್ಲುತ್ತಿದ್ದ ಒಂದು ದಾರಿಯನ್ನು ಸುಗಮಗೊಳಿಸಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸಚಿವರ ಮೇಲೆ ಹನಿಟ್ರ್ಯಾಪ್ ಷಡ್ಯಂತ್ರ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಹನಿಟ್ರ್ಯಾಪ್ ಷಡ್ಯಂತ್ರದ ಬಗ್ಗೆ ತಿಳಿದುಕೊಂಡ ಸಚಿವರು ಕಾಂಗ್ರೆಸ್ ಪಕ್ಷದ ವರಿಷ್ಠರು ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೂ ದೂರು ನೀಡಿದ್ದಾರೆ ಎನ್ನಲಾಗಿದೆ.
ಹನಿಟ್ರ್ಯಾಪ್ ಷಡ್ಯಂತ್ರಕ್ಕೆ ಒಳಗಾದ ಸಚಿವ ಸ್ವಲ್ಪ ಯಾಮಾರಿದ್ದರೂ ಚಾರಿತ್ರ್ಯವಧೆ ಆಗುತ್ತಿತ್ತು. ಸದ್ಯ ಹನಿಟ್ರ್ಯಾಪ್ ಷಡ್ಯಂತ್ರದಿಂದ ಪಾರಾಗಿರುವ ಸಚಿವ ನಿಟ್ಟುಸಿರು ಬಿಟ್ಟಿದ್ದಾರೆ.