ಮಾಜಿ ಸಚಿವರಿಗೆ ಹನಿಟ್ರ್ಯಾಪ್: ಕಾಂಗ್ರೆಸ್ ನಾಯಕಿ ಮಂಜುಳಾ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಚಿವನಿಗೆ ಹನಿಟ್ರ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಪಟ್ಟಂತೆ ಕಾಂಗ್ರೆಸ್ ನಾಯಕಿಯ ಬಂಧನವಾಗಿದೆ.

ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ, ಸಂಬಂಧಿತ ವಿಡಿಯೋವನ್ನು ಇಟ್ಟುಕೊಂಡು ಬರೋಬ್ಬರಿ 20 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಆರಂಭದಲ್ಲಿ ತಾನು ಕಾಂಗ್ರೆಸ್ ನಾಯಕ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಮೊಬೈಲ್ ನಂಬರ್ ಪಡೆದು ವಾಟ್ಸಾಪ್‌ನಲ್ಲಿ ತನ್ನ ಪರಿಚಯ ಮಾಡಿಕೊಂಡಿದ್ದಾಳೆ.

ನಂತರ, ವಾಟ್ಸಾಪ್‌ನಲ್ಲಿ ಹಾಯ್, ಬಾಯ್.. ಚಾಟ್ ಮಾಡಿದ್ದಾಳೆ. ನಂತರ, ಸಲುಗೆಯಿಂದ ಚಾಟಿಂಗ್ ಮಾಡುತ್ತಾ, ತೀರಾ ಆಪ್ತತೆಯನ್ನು ಬೆಳೆಸಿಕೊಂಡು ಸೆಕ್ಸ್ ಚಾಟ್ ಆರಂಭಿಸಿದ್ದಾಳೆ. ಇದಾದ ನಂತರ ಇಬ್ಬರ ನಡುವೆ ವಾಟ್ಸಾಪ್ ವಿಡಿಯೋ ಕರೆ ಮೂಲಕ ಖಾಸಗಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವಿಡಿಯೋ, ಫೋಟೋಗಳನ್ನು ಸಂಗ್ರಹ ಮಾಡಿಕೊಂಡು, ನಂತರ ಈ ವಿಡಿಯೋವನ್ನು ಮಾಜಿ ಸಚಿವರಿಗೆ ಕಳುಹಿಸಿ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ.

ಮುಂದುವರೆಗೆ ನನಗೆ ನೀವು 20 ಲಕ್ಷ ರೂ. ಹಣವನ್ನು ಕೊಡದಿದ್ದರೆ ನಿಮ್ಮ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡುವುದಾಗಿ ಹೇಳುತ್ತಾಳೆ. ಆಗ ಮಾಜಿ ಸಚಿವರಿಗೆ ತನ್ನ ಮಾನ ಮರ್ಯಾದೆ ಹಾಲಾಗುತ್ತದೆ ಎಂದು ಭಯಗೊಳ್ಳುತ್ತಾರೋ ಈ ವಿಚಾರವನ್ನು ತನ್ನ ಪುತ್ರನ ಬಳಿ ಹೇಳಿಕೊಳ್ಳುತ್ತಾರೆ. ಬಳಿಕ ಪುತ್ರ ಸಂಬಂಧಪಟ್ಟ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ, ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ, ಆಕೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸಚಿವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳನ್ನು 8 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಆರೋಪಿತೆ ಮಂಜುಳ ಪಾಟೀಲ್ ಹಾಗೂ ಆಕೆಯ ಗಂಡ ಶಿವರಾಜ್ ಪಾಟೀಲ್ ಸಿಸಿಬಿ ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!