ಹೊಸದಿಗಂತ ಡಿಜಿಟಲ್ ಡೆಸ್ಕ್;
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತಂತೆ ಇಂದು ಗಂಭೀರವಾದ ಚರ್ಚೆ ನಡೆಯಿತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಕೆ.ಎನ್ ರಾಜಣ್ಣ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಹನಿಟ್ರ್ಯಾಪ್ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದಲ್ಲೂ ಕೂಡ 48 ಜನರ ಪೆನ್ ಡ್ರೈವ್ ಇದೆ ಎಂದು ಹೊಸ ಬಾಂಬ್ ಸಿಡಿಸಿದರು.
ಶಾಸಕ ಯತ್ನಾಳ್ ಅವರ ಆರೋಪಕ್ಕೆ ಉತ್ತರಿಸಿದ ರಾಜಣ್ಣ , ಕರ್ನಾಟಕ ಸಿಡಿ ಪೆನ್ ಡ್ರೈವ್ ಕಾರ್ಖಾನೆಯಾಗಿದೆ. ಸಿಡಿ ಮಾಡುವಂತಹ 48 ಜನರು ಇದ್ದಾರೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ರಾಷ್ಟ್ರಮಟ್ಟದವರೆಗೂ ಹನಿ ಟ್ರ್ಯಾಪ್ ಆಗಿದೆ. 48 ಜನರ ಪೆನ್ ಡ್ರೈವ್ ಕೂಡ ಇದೆ. ಈ ಕುರಿತು ನಾನು ಗ್ರಹ ಮಂತ್ರಿಗಳಿಗೆ ಲಿಖಿತವಾದ ದೂರು ನೀಡುತ್ತೇನೆ. ಹನಿ ಟ್ರ್ಯಾಕ್ ಹಿಂದೆ ದೊಡ್ಡ ಜಾಲವೇ ಇದೆ ಇದರ ಹಿಂದೆ ಯಾರೇ ಇದ್ದರೂ ಹೊರಬರಲೇಬೇಕು ಎಂದರು.
ರಾಷ್ಟ್ರಮಟ್ಟದ ಎಲ್ಲಾ ಪಕ್ಷಗಳ ಮುಖಂಡರುಗಳ ಪೆನ್ ಡ್ರೈವ್ ಕೂಡ ಇದೆ. ಆ ಒಂದು ದೃಷ್ಟಿಯಲ್ಲಿ ನನ್ನ ಮೇಲಿನ ಏನು ಆರೋಪ ಇದೆ ಅದಕ್ಕೆ ಕ್ಲಾರಿಫಿಕೇಶನ್ ಕೊಡಲು ಗೃಹ ಮಂತ್ರಿಗಳಿಗೆ ದೂರು ನೀಡುತ್ತೇನೆ. ದೂರನ್ನು ಆಧರಿಸಿ ಅವರು ತನಿಖೆ ಮಾಡಿಸಲಿ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಕುರಿತು ಹೊರಗಡೆ ಬರಲಿ ಜನರಿಗೆ ಗೊತ್ತಾಗಲಿ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.