ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿರುವ ಹನಿಟ್ರ್ಯಾಪ್ ವಿಚಾರ ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದು, ಹನಿಟ್ರ್ಯಾಪ್ ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ನ್ಯಾ. ವಿಕ್ರಮ್‌ನಾಥ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೇ ವಿಚಾರಣೆ ವೇಳೆ ಅರ್ಜಿದಾರ ಬಿನಯ್ ಕುಮಾರ್ ಸಿಂಗ್ ತರಾಟೆಗೆ ತೆಗೆದುಕೊಂಡಿತು.
ನೀವು ಜಾರ್ಖಂಡ್ ಮೂಲದವರು, ಕರ್ನಾಟಕಕ್ಕೂ ನಿಮಗೂ ಏನು ಸಂಬಂಧ? ಪೊಲಿಟಿಕಲ್ ನಾನ್‌ಸೆನ್ಸ್‌ಗಳನ್ನು ವಿಚಾರಣೆ ನಡೆಸಲು ನಾವು ಇಲ್ಲಿ ಕೂತಿಲ್ಲ. ನ್ಯಾಯಾಧೀಶರು ಯಾಕೆ ಹನಿಟ್ರ‍್ಯಾಪ್‌ಗೆ ಒಳಗಾಗುತ್ತಾರೆ? ಅದನ್ನು ನ್ಯಾಯಾಧೀಶರು ನೋಡಿಕೊಳ್ತಾರೆ. ಇಂತಹ ಅರ್ಜಿ ವಿಚಾರಣೆ ನಡೆಸಿಕೊಂಡು ಕೂರಲು ನಮಗೆ ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ಗೆ ಮಾಡಲು ಸಾಕಷ್ಟು ಕೆಲಸ ಇದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಅರ್ಜಿದಾರರ ಮನವಿ ಏನು?
ಕರ್ನಾಟಕದಲ್ಲಿ ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಗುರಿಯಾಗಿಟ್ಟುಕೊಂಡು ಹನಿಟ್ರ‍್ಯಾಪ್ ಪ್ರಕರಣ ನಡೆದಿದೆ. ಈ ಬಗ್ಗೆ ಸಚಿವರೇ ವಿಧಾನಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗೀ ಈ ಬಗ್ಗೆ ಸಿಬಿಐ ಅಥಾವ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದರು.