ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ‍್ಯಾಪ್ ಕುರಿತು ಸಮಗ್ರ ತನಿಖೆಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆ ಆಗಲಿ ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಈ ಹನಿಟ್ರ‍್ಯಾಪ್ ಹಿಂದೆ ಯಾರ್ಯಾರಿದ್ದಾರೆ? ಯಾರ್ಯಾರನ್ನು ಬಲಿ ತೆಗೆದುಕೊಳ್ಳುವ ವಿಚಾರ ಇದೆ ಎಂಬುದು ಬಹಿರಂಗ ಆಗಬೇಕಿದೆ. ಸರ್ಕಾರ ಕೂಡಲೇ ರಾಜೇಂದ್ರ ಅವರಿಗೆ ಭದ್ರತೆ ಒದಗಿಸಬೇಕು. ಹನಿಟ್ರ‍್ಯಾಪ್ ವಿಚಾರವನ್ನು ಸಿಬಿಐ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ರವಿಕುಮಾರ್ ಒತ್ತಾಯಿಸಿದ್ದಾರೆ.