ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳ ಜೀವಕ್ಕಿಂತ ಮಾನ ಮರ್ಯಾದಿ ಮುಖ್ಯ ಎಂದು ತಾಯಿಯೊಬ್ಬಳು ಮದುವೆಯಾಗದೆ ಪ್ರೆಗ್ನೆಂಟ್ ಆದ ಮಗಳನ್ನು ಕೊಂದಿದ್ದಾಳೆ.
ಮಗಳು ಮದುವೆಯಾಗದೆ ಗರ್ಭಿಣಿಯಾಗಿದ್ದಾಳೆಂದು ತಿಳಿದ ತಾಯಿ ಕಿರಿಯ ಮಗಳ ಸಹಾಯದಿಂದ ಆಕೆಯನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಗರ್ಭಿಣಿ ಎಂದು ತಿಳಿದ ಆಕೆ ತನ್ನ ಮಗಳನ್ನು ಕೊಂದ ಆರೋಪದ ಮೇಲೆ 46 ವರ್ಷದ ಮಹಿಳೆಯನ್ನು ಶುಕ್ರವಾರ ಬಂಧಿಸಲಾಗಿದೆ. ಮೃತಳ ತಂಗಿ ಈ ಕೊಲೆಗೆ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ 20 ವರ್ಷದ ಮಗಳು ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು. ಆದಾಗ್ಯೂ, ಪೊಲೀಸರು ಆಕೆಯ ದೇಹದ ಮೇಲೆ ಅನುಮಾನಾಸ್ಪದ ಗಾಯಗಳನ್ನು ಕಂಡಿದ್ದಾರೆ.
ನಲ್ಲಸೋಪರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಆಕೆಯ ಮುಖದ ಮೇಲೆ ಊತ ಮತ್ತು ದೇಹದ ಮೇಲೆ ಕೆಲವು ಅನುಮಾನಾಸ್ಪದ ಗಾಯಗಳಿರುವುದನ್ನು ಕಂಡುಕೊಂಡಿದ್ದರು. ಹಾಗಾಗಿ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆಕಳುಹಿಸಿದ್ದಾರೆ.